ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 13 ಕೆಜಿ ಗಾಂಜಾ ಸಹಿತ ಇಬ್ಬರ ಸೆರೆ
Monday, March 13, 2023
ಮಂಗಳೂರು: ನಗರದ ಅಳಪೆ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ದಸ್ತಗಿರಿ ನಡೆಸಿ, ಆರೋಪಿಗಳಿಂದ ಸುಮಾರು 4ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ
ಆಲಡ್ಕ ಬಂಗ್ಲೆಗುಡ್ಡೆ ಹೌಸ್ ನಿವಾಸಿ ಅಬ್ದುಲ್ ಸಾದಿಕ್ (35) ಹಾಗೂ ಬೆಳ್ತಂಗಡಿ ಕಕ್ಕಿಂಜೆ ಗಾಂಧಿನಗರ
ಮನೆ ನಿವಾಸಿ ನವಾಜ್ (24) ಬಂಧಿತರು.
ಬಂಧಿತ ಆರೋಪಿಗಳಿಂದ
3.90 ಲಕ್ಷ ರೂ. ಮೌಲ್ಯದ 13 ಕೆಜಿ ಗಾಂಜಾ ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಆಂಧ್ರಪ್ರದೇಶದಿಂದ ಬೆಂಗಳೂರು ಮೂಲಕವಾಗಿ ಮಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದರು ಎನ್ನಲಾಗಿದೆ.
ಎಸಿಪಿ ಪಿಎ ಹೆಗ್ಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ನಡೆಸಲಾಗಿದೆ.
ಇದರಲ್ಲಿ ಸಾದಿಕ್
ಮೇಲೆ ಕಳೆದ ವರ್ಷ ಮೈಸೂರಿನ ಲಷ್ಕರ್ ಮೊಹಲ್ಲಾ ಠಾಣೆಯಲ್ಲಿ ಗಾಂಜಾ ಸಾಗಾಟದ ಕೇಸ್ ದಾಖಲಾಗಿವೆ.