ರಕ್ಷಿತ್ ಶೆಟ್ಟಿ ತುಳುವ, ನಮ್ಮ ಹೆಮ್ಮೆ: ಪತ್ರದ ಮೂಲಕ ದೊಡ್ಡತನ ಮೆರೆದ ಮಿಥುನ್ ರೈ!
ಮಂಗಳೂರು: ಮಿಥುನ್ ರೈ ವಿರುದ್ಧ ಟ್ವೀಟ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತನ್ನಾಡುವ ಮೂಲಕ ಕಾಂಗ್ರೆಸ್ ಯುವ ನಾಯಕ
ಮಿಥುನ್ ರೈ ತನ್ನ ದೊಡ್ಡತನ ಮೆರೆದಿದ್ದಾರೆ.
ಮಿಥುನ್ ರೈ ಹೆಸರೆತ್ತದೇ ಪರೋಕ್ಷವಾಗಿ ಅವರಿಗೆ ರಕ್ಷಿತ್ ಶೆಟ್ಟಿ
ಟಾಂಗ್ ನೀಡಿದ್ದರು. ʼʼಯಾವುದೇ ವಿಷಯ ಗೊತ್ತಿಲ್ಲದೇ ಉಡುಪಿ ದೇಗುಲದ ಬಗ್ಗೆ ನಾನ್ ಸೆನ್ಸ್ ಹೇಳಿಕೆ
ನೀಡುವುದು ಯಾಕೆ?ʼʼ ಎಂದು ರಕ್ಷಿತ್ ಟ್ವೀಟಿಸಿದ್ದರು.
ಬಳಿಕ ಟ್ವೀಟ್ ಬಳಕೆದಾರರು ರಕ್ಷಿತ್ ಶೆಟ್ಟಿ ವಿರುದ್ಧ ಹರಿಹಾಯುತ್ತಲೇ,
ಮಿಥುನ್ ನನ್ನ ಸ್ನೇಹಿತ ಎಂದು ಟ್ವೀಟಿಸಿ ವಿವಾದವನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದರು.
ಇದೀಗ ಮಿಥುನ್ ರೈ ಟ್ವೀಟ್ ಮೂಲಕ ಪತ್ರವೊಂದು ಬರೆದಿದ್ದು, ನಾನು
ಏನು ಮಾತನಾಡಿದ್ದೆನೋ, ಅದೆಲ್ಲವೂ ಪೇಜಾವರ ಶ್ರೀಗಳು ಹೇಳಿದ ಮಾತಾಗಿತ್ತು. ಅದ್ಯಾವುದೂ ನನ್ನ ಸ್ವಂತದ್ದಲ್ಲ,
ನಾನು ಇತಿಹಾಸಕಾರನೂ ಅಲ್ಲ. ಆದರೆ, ಬಿಜೆಪಿ ವಿವಾದವೆಬ್ಬಿಸಿ ರಾಜ್ಯದಲ್ಲಿ ನಡೆಯುತ್ತಿರುವ ಸರಕಾರದ
ಭ್ರಷ್ಟಾಚಾರ ವಿಚಾರವನ್ನ ಡೈವರ್ಟ್ ಮಾಡಲು ಇದನ್ನ ಬಳಸಿಕೊಂಡಿದೆ.
ಇನ್ನು ರಕ್ಷಿತ್ ಶೆಟ್ಟಿ ಅವರ ಅಭಿಪ್ರಾಯವನ್ನ ತಿಳಿಸಿದ್ದಾರೆ. ನಾನು
ನನಗೆ ಸರಿ ಕಂಡಿದ್ದನ್ನ ತಿಳಿಸಿದ್ದೇನೆ. ಶ್ರೀಗಳು ಬೋಧಿಸಿದಂತೆ ಕೋಮು ಸೌಹಾರ್ದತೆಯೇ ನನ್ನ ಉದ್ದೇಶವಾಗಿತ್ತು.
ಮುಂದುವರೆದು, ರಕ್ಷಿತ್ ಶೆಟ್ಟಿ ತುಳುವನಾಗಿದ್ದು, ನಮ್ಮೆಲ್ಲರ ಹೆಮ್ಮೆಯಾಗಿದ್ದಾರೆ.
ಯಾರೂ ಅವರನ್ನು ವೈಯಕ್ತಿಯವಾಗಿ ಗುರಿಯಾಗಿಸದೇ, ಈ ವಿವಾದವನ್ನು ಇಲ್ಲಿಗೆ ಅಂತ್ಯಹಾಡಬೇಕು ಎಂದು ಮಿಥುನ್
ರೈ ತನ್ನ ಬೆಂಬಲಿಗರಿಗೆ ಕೇಳಿಕೊಂಡಿದ್ದಾರೆ.
— Mithun Rai (@TheMithunRai) March 12, 2023
ನಾವು ತುಳುನಾಡನ್ನ ಇನ್ನಷ್ಟು ಬಲಿಷ್ಠಗೊಳಿಸಲು ಎಲ್ಲ ಭೇದ ಭಾವಗಳನ್ನು
ತೊರೆದು ಒಂದಾಗುವಂತೆ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
Also Read: ರಥಬೀದಿಯಲ್ಲಿರುವ ಈಶ್ವರ ದೇಗುಲಗಳು ಕೃಷ್ಣಮಠಕ್ಕಿಂತಲೂ ಹಳೆಯದು: ರಕ್ಷಿತ್ ಶೆಟ್ಟಿ ಟ್ವೀಟ್