-->
ರಥಬೀದಿಯಲ್ಲಿರುವ ಈಶ್ವರ ದೇವಸ್ಥಾನಗಳು ಕೃಷ್ಣಮಠಕ್ಕಿಂತಲೂ ಹಳೆಯದು: ರಕ್ಷಿತ್ ಶೆಟ್ಟಿ ಟ್ವೀಟ್

ರಥಬೀದಿಯಲ್ಲಿರುವ ಈಶ್ವರ ದೇವಸ್ಥಾನಗಳು ಕೃಷ್ಣಮಠಕ್ಕಿಂತಲೂ ಹಳೆಯದು: ರಕ್ಷಿತ್ ಶೆಟ್ಟಿ ಟ್ವೀಟ್

ಬೆಂಗಳೂರು: ಉಡುಪಿ ಕೃಷ್ಣಮಠಕ್ಕೆ ಮುಸ್ಲಿಮರ ಕೊಡುಗೆ ಬಗ್ಗೆ ಪೇಜಾವರ ಶ್ರೀಗಳ ಮಾತನ್ನೇ ಉಲ್ಲೇಖಿಸಿ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಪೇಚಿಗೆ ಸಿಲುಕಿದ್ದು ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರವನ್ನ ಬಿಜೆಪಿ ಮತ್ತು ಸಂಘ ಪರಿವಾರ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುವಂತೆ ನೋಡಿಕೊಂಡಿದೆ. ಇದೀಗ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದು, ಮಿಥುನ್ ರೈ ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ಜೊತೆಗೆ, ಕೃಷ್ಣಮಠಕ್ಕಿಂತಲೂ ಮೊದಲು ರಥಬೀದಿಯಲ್ಲಿ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇಗುಲಗಳು ಇದ್ದವು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಮಿಥುನ್ ರೈ ವಿರುದ್ಧದ ಟ್ವೀಟ್ ಗೆ ಸಾಕಷ್ಟು ಪರ ವಿರೋಧದ ಕಾಮೆಂಟ್ ಗಳು ವ್ಯಕ್ತವಾಗಿದ್ದವು. 

"ಉಡುಪಿ ದೇಗುಲದ ಇತಿಹಾಸ ಗೊತ್ತಿಲ್ಲದೇ ನಾನ್ ಸೆನ್ಸ್ ಆಗಿ ಸಾರ್ವಜನಿಕ ವೇದಿಕೆಯಲ್ಲಿ ಯಾಕೆ ಮಾತಾಡಬೇಕು?" ಎಂದು ಶೆಟ್ಟಿ ರೈ ಗೆ ಟ್ವೀಟ್ ಟಾಂಗ್ ಕೊಟ್ಟಿದ್ದರು. ಈ ಟ್ವೀಟ್ ಅನ್ನ ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ‌.  


ಇನ್ನೊಂದೆಡೆ ಮುಂದುವರೆದು, ಕೃಷ್ಣ ಮಠಕ್ಕಿಂತಲೂ ಹಳೆಯದು ರಥಬೀದಿಯಲ್ಲಿರುವ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇಗುಲ ಎಂದು ಟ್ವೀಟಿಸಿದ್ದಾರೆ. ಇದು ಪ್ರಗತಿಪರ, ಶಿವ ಭಕ್ತರ ಮೆಚ್ಚುಗೆ ಪಡೆದುಕೊಂಡಿದ್ದು ಹೊಸ ಚರ್ಚೆಗೂ ನಾಂದಿ ಹಾಡಿದೆ‌.

 ಅದಲ್ಲದೇ, "ಮಿಥುನ್ ರೈ ನನ್ನ ಸ್ನೇಹಿತ. ಅವರ ವಿರುದ್ಧ ನಾನು ಟ್ವೀಟ್ ಮಾಡಿಲ್ಲ. ಆದರೆ ವಾಸ್ತವ ವಾಸ್ತವೇ ಆಗಿರುತ್ತೆ. ಪೇಜಾವರ ಸ್ವಾಮೀಜಿಗಳು ಬೇರೆ ಜಾಗದ ಬಗ್ಗೆ ಮಾತನಾಡಿದ್ದರು" ಎಂದು ಟ್ವೀಟಿಸಿದ್ದಾರೆ.


Ads on article

Advertise in articles 1

advertising articles 2

Advertise under the article