ಉಳ್ಳಾಲ: ರಿಯಾಝ್ ಫರಂಗಿಪೇಟೆಗೆ ಭರ್ಜರಿ ಸ್ವಾಗತ; ಕಾಂಗ್ರೆಸ್ ಭದ್ರಕೋಟೆಯಲ್ಲಿ SDPI ಸಂಚಲನ!
Friday, March 3, 2023
ಮಂಗಳೂರು: ಮಂಗಳೂರು
ವಿಧಾನಸಭಾ (ಉಳ್ಳಾಲ) ಕ್ಷೇತ್ರದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಧಿಕೃತ ಅಭ್ಯರ್ಥಿಯಾಗಿ
ರಿಯಾಝ್ ಫರಂಗಿಪೇಟೆ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಉಳ್ಳಾಲಕ್ಕೆ ಶುಕ್ರವಾರ ಸಂಜೆ ಆಗಮಿಸಿದರು.
ನೂರಾರು ಸಂಖ್ಯೆಯಲ್ಲಿ
ನೆರೆದಿದ್ದ ಎಸ್ಡಿಪಿಐ ಕಾರ್ಯಕರ್ತರು ರಿಯಾಝ್ ಫರಂಗಿಪೇಟೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಜೈಕಾರದೊಂದಿಗೆ ಫರಂಗಿಪೇಟೆ ಅವರು ಉಳ್ಳಾಲ ಜಂಕ್ಷನ್ ನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿದರು.
ಇದುವರೆಗೂ ಕಾಂಗ್ರೆಸ್
ಭದ್ರಕೋಟೆಯಂತಿದ್ದ ಉಳ್ಳಾಲದಲ್ಲಿ ರಿಯಾಝ್ ಫರಂಗಿಪೇಟೆ ಸ್ಪರ್ಧೆ ವಿಚಾರವು ಕುತೂಹಲ ಕೆರಳಿಸಿದೆ. ಮುಂಬರುವ
ವಿಧಾನಸಭಾ ಚುನಾವಣೆಯಲ್ಲಿ ರಿಯಾಝ್ ಫರಂಗಿಪೇಟೆ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್
ನ ಹಾಲಿ ಶಾಸಕ ಯುಟಿ ಖಾದರ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ವೀಡಿಯೋ ವೀಕ್ಷಿಸಿ