ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬಿ.ಎಸ್. ಯಡಿಯೂರಪ್ಪ??
ಬೆಂಗಳೂರು: ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ತಿಂಗಳುಗಳೇ ಬಾಕಿ ಇರುವಂತದ್ದು, ಹೀಗಿರುವಾಗ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ತಮ್ಮ ತಮ್ಮ ಪ್ರಚಾರದಲ್ಲಿ ಈಗಾಗ್ಲೇ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಈ ಭಾರೀ ಹೇಗಾದ್ರೂ ಅಧಿಕಾರಕ್ಕೆ ಬರಲೇ ಬೇಕು ಎಂಬ ಹಂಬಲದಲ್ಲಿದ್ದಾರೆ. ಇತ್ತ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಎತ್ತಿ ಹಿಡಿಯುತ್ತೇವೆ ಅನ್ನೋ ವಿಶ್ವಾಸದಲ್ಲಿದೆ.
ಆದ್ರೆ ಈ ಭಾರೀ ಮತದಾರ ಪ್ರಭು ಯಾರ ಕೈ ಹಿಡಿಯುತ್ತಾನೆ ಎಂಬುದು ನೋಡಬೇಕು. ಹೀಗಾಗಿಯೇ ಆಯಾ ಪಕ್ಷಗಳ ಪ್ರಮುಖ ನಾಯಕರು ರಾಜ್ಯದಲ್ಲಿ ತಮ್ಮ ತಮ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದ್ರೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವ್ರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಪ್ರಚಾರಕ್ಕೆ ಸರಿಯಾದ ನಾಯಕತ್ವವೂ ಇಲ್ಲ. ಯಡಿಯೂರಪ್ಪನಂತ ಸಾಮ್ರಾಟ್ ರಾಜ್ಯ ಬಿಜೆಪಿಯಲ್ಲಿ ಇಲ್ಲ. ಹಾಗಾಗಿಯೇ ಈ ಭಾರೀ ಚುನಾವಣೆಯನ್ನ ಯಾರನ್ನ ಮುಂಚೂಣಿಯಲ್ಲಿಟ್ಟು ಮುಂದುವರಿಯೋದು ಅನ್ನೋ ಪ್ರಶ್ನೆಯೂ ಬಿಜೆಪಿಯಲ್ಲಿದೆ. ಹಾಗಾಗಿಯೇ ಬಿಜೆಪಿ ಹೈಕಮಾಂಡ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ಮಾತು ಬಿಜೆಪಿ ಮೂಲದಿಂದ `ದಿ ನ್ಯೂಸ್ ಅವರ್' ಗೆ ಲಭಿಸಿದೆ.
ಯಡಿಯೂರಪ್ಪ ಅವರನ್ನ ಮುಂದಿಟ್ಟುಕೊಂಡು ಈ ಭಾರೀ ರಾಜ್ಯ ಚುನಾವಣೆಯನ್ನ ಎದುರಿಸಲು ಬಿಜೆಪಿ ಸಜ್ಜಾಗಿದೆ. ಹಾಗಾಗಿಯೇ ಬಿಜೆಪಿ ಹೈಕಮಾಂಡ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನ ನೇಮಕ ಮಾಡಲು ಹೊರಟಿದೆ.