%20(5).jpeg)
ಜಲೀಲ್ ಹತ್ಯೆ ಪ್ರಕರಣ: ಆರೋಪಿ ಪವನ್ ಗೆ ಜಾಮೀನು ಮಂಜೂರು
Friday, March 3, 2023
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದಲ್ಲಿ ನಡೆದಿದ್ದ ಜಲೀಲ್ ಹತ್ಯೆ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ಮೂರನೇ ಆರೋಪಿಗೆ ಮಂಗಳೂರು ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿದೆ.
ಪ್ರಕರಣದಲ್ಲಿ ಮೂರನೇ ಆರೋಪಿ ಹಾಗೂ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಆರೋಪದ ಮೇಲೆ ಪವನ್ ಬಂಧಿಸಲಾಗಿತ್ತು. ಹತ್ಯೆ ಸಂದರ್ಭ ಪವನ್ ತನ್ನ ಬೈಕ್ ನಲ್ಲಿ ಆರೋಪಿಗಳಿಗೆ ಡ್ರಾಪ್ ಕೊಟ್ಟಿದ್ದಲ್ಲದೇ, ಹತ್ಯೆ ಬಳಿಕ ವಾಪಸ್ ಕರೆದೊಯ್ದಿದ್ದನು. ಹೀಗಾಗಿ ಪವನ್ ನನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದರು.
ಕಳೆದ ಡಿಸೆಂಬರ್ 24 ರಂದು ಜಲೀಲ್ ಅವರನ್ನು ಕಾಟಿಪಳ್ಳ 4 ನೇ ಬ್ಲಾಕ್ ನಲ್ಲಿ ಇರುವ ಅವರ ಅಂಗಡಿಯಲ್ಲಿ ಹತ್ಯೆಗೈಯ್ಯಲಾಗಿತ್ತು.
ಇದೀಗ ಪ್ರಕರಣದ ಮೂರನೇ ಆರೋಪಿ ಪವನ್ ಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಜೋಷಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಯ ಪರವಾಗಿ ಮಂಗಳೂರಿನ ವಕೀಲರಾದ ಶ್ರೇಯಸ್ ಎಸ್ .ಕೆ ಮತ್ತು ಹರ್ಷಿತ್ ವಾದಿಸಿದರು.