ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್; ಮಿತ್ತೂರಿನ ಫ್ರೀಡಂ ಹಾಲ್ ಸಂಪೂರ್ಣ NIA ಸ್ವಾಧೀನಕ್ಕೆ!
ಪುತ್ತೂರು:
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಬಳಸುತ್ತಿದ್ದ ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ಅನ್ನ ರಾಷ್ಟ್ರೀಯ
ತನಿಖಾ ಸಂಸ್ಥೆಯು ಸಂಪೂರ್ಣವಾಗಿ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ.
ಈ ಹಿಂದೆಯೇ
ಪಿಎಫ್‌ಐ ನಾಯಕರ ಬಂಧನದ ವೇಳೆ ಈ ಹಾಲ್ ಅನ್ನ ಎನ್‌ಐಎ ತಂಡವು ಸೀಝ್ ಮಾಡಿತ್ತು. ಬಳಿಕ ಪಿಎಫ್‌ಐ
ನಿಷೇಧದ ಬಳಿಕ ಇದನ್ನ ಜಿಲ್ಲಾಡಳಿತವು ಬೀಗಮುದ್ರೆ ಹಾಕಿ ತನ್ನ ವಶಕ್ಕೆ ಪಡೆದಿತ್ತು.
ಈ ಸಭಾಂಗಣವನ್ನ
ಭಯೋತ್ಪಾದನಾ ಚಟುವಟಿಕೆಗೆ ಬಳಸಲಾಗುತ್ತಿತ್ತು ಎಂದು ಎನ್‌ಐಎ ತಿಳಿಸಿದೆ. ಅಲ್ಲದೇ, ಪ್ರವೀಣ್ ನೆಟ್ಟಾರ್
ಹತ್ಯೆಗೆ ಬೇಕಾದ ತಯಾರಿಯೂ ಇದೇ ಹಾಲ್ ನಲ್ಲಿ ನಡೆದಿತ್ತು ಎಂದು ಎನ್ಐಎ ಸ್ಪಷ್ಟಪಡಿಸಿದೆ. 0.20
ಎಕರೆ ಜಾಗವನ್ನು ಸಂಪೂರ್ಣ ತನ್ನ ಹಿಡಿತಕ್ಕೆ ಪಡೆದಿದ್ದಾಗಿ ಖುದ್ದು ಎನ್ಐಎ
ಆದೇಶವಿತ್ತಿದೆ.
ಹಾಲ್ ಮಾಲೀಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಆರ್ಡರ್ ಕಾಪಿ ರವಾನಿಸಿದ್ದು, NIA ವಶದಲ್ಲಿರೋ ಆ ಜಾಗವನ್ನು ಪರಾಭಾರೆ ಮಾಡುವಂತಿಲ್ಲ. ಬಾಡಿಗೆ, ಲೀಜ್ ಕೊಡುವಂತಿಲ್ಲ. ಅಲ್ಲಿರೋ ಯಾವುದೇ ಪ್ರಾಪರ್ಟಿ ಸಾಗಿಸೋದು ಅಥವಾ ನವೀಕರಣ ಮಾಡುವಂತಿಲ್ಲ ಎಂದು ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎನ್‌ಐಎ, ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳಿಗೆ ಸೇರಿದ ಆಸ್ತಿಯನ್ನ ತನ್ನ ಸ್ವಾಧೀನ ಪಡೆದುಕೊಂಡಂತಾಗಿದೆ.