ಮಂಗಳೂರು: ಯೇನೆಪೋಯ ನೇತೃತ್ವದಲ್ಲಿ ಮುಸ್ಲಿಂ ಉದ್ಯಮಿಗಳ ರಹಸ್ಯ ಸಭೆ!; ಪ್ರಶ್ನಿಸಿದ SDPI ನಾಯಕರು
ಮಂಗಳೂರು: ಎರಡು ದಿನಗಳ ಹಿಂದಷ್ಟೇ ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ಮುಸ್ಲಿಂ ಉದ್ಯಮಿಗಳ ರಹಸ್ಯ ಸಭೆಯೊಂದು ನಡೆದಿದ್ದಾಗಿ ತಿಳಿದು ಬಂದಿದ್ದು, ಇದೇ ವಿಚಾರವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ವೇಳೆ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದವರು ಸಭೆ ನಡೆಸಿದ್ದಾರೆ ಎಂದು ಕೆಲವರು ಆಕ್ಷೇಪಿಸಿದ್ದಾರೆ. ಆದರೆ ಎಸ್ಡಿಪಿಐ ಮುಖಂಡರಾದ ಅನ್ವರ್ ಸಾದಾತ್ ಬಜತ್ತೂರು ಹಾಗೂ ರಿಯಾಝ್ ಕಡಂಬು ತಮ್ಮ ಫೇಸ್ಬುಕ್ ವಾಲ್ ಗಳಲ್ಲಿ ಈ ಕುರಿತು ಪ್ರಶ್ನಿಸಿದ್ಧಾರೆ.
''ಯೇನೆಪೋಯ ಅಬ್ದುಲ್ಲ ಕುಂಜ್ಞಿ ನೇತೃತ್ವದಲ್ಲಿ ಕಾಂಗ್ರೆಸ್ ಮುಸ್ಲಿಂ ನಾಯಕರ ಸಭೆ ನಡೆದಿದೆ. ಇದರ ಉದ್ದೇಶ ಸಮುದಾಯದ ಸಮಸ್ಯೆಗೆ ಪರಿಹಾರವೋ?, ಕಾಂಗ್ರೆಸ್ ನಾಯಕರ ಸಮಸ್ಯೆಗೆ ಪರಿಹಾರವೋ? ಅಥವಾ ಯೇನೆಪೋಯ ಸಾಮ್ರಾಜ್ಯ ಇನ್ನಷ್ಟು ವಿಸ್ತರಿಸುವ ಉದ್ದೇಶವೋ?ʼʼ ಎಂದು ಅನ್ವರ್ ಸಾದಾತ್ ಫೇಸ್ಬುಕ್ ನಲ್ಲಿ ಪ್ರಶ್ನಿಸಿದ್ದಾರೆ.
ಇನ್ನೋರ್ವ ಎಸ್ಡಿಪಿಐ ಮುಖಂಡ ರಿಯಾಝ್ ಕಂಡಬು, ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದ, ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸನ್ಮಾನ ಮಾಡಿದ್ದ ಕಾಂಗ್ರೆಸ್ ನ ಮುಸ್ಲಿಂ ನಾಯಕರಿಂದ ಮಂಗಳೂರಿನಲ್ಲಿ ರಹಸ್ಯ ಸಭೆಯಂತೆ, ಯಾಕಾಗಿರಬಹುದು? ಅಂತಾ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ರಿಯಾಝ್ ಕಡಂಬು ತನ್ನ ಫೇಸ್ಬುಕ್ ಖಾತೆಯಲ್ಲಿ ಯೇನೆಪೋಯ
ಮುಖ್ಯಸ್ಥ ಅಬ್ದುಲ್ಲ ಕುಂಜ್ಞಿ ಪುತ್ರ ಫರಾದ್ ಅವರ ಕುರಿತ ಕೆಲವು ಪ್ರಶ್ನೆಗಳನ್ನ ಎತ್ತಿದ್ದಾರೆ.
ಅಷ್ಟೇ ಅಲ್ಲದೇ, ವಿದ್ಯಾರ್ಥಿಗಳು ತಂಗುವ ಹಾಸ್ಟೆಲ್ ನಲ್ಲಿ ಡ್ರಗ್ ದಂಧೆ ನಡೆಯುತ್ತಿದೆ ಅನ್ನೋದರ
ಕುರಿತಾಗಿ ಬರೆದಿರುವ ಲೇಖನವೊಂದನ್ನು ಪೋಸ್ಟ್ ಮಾಡಿದ್ದಾರೆ.