ಕಡಬ: ಬೆಳ್ಳಂ ಬೆಳಗ್ಗೆ ಕಾಡಾನೆ ದಾಳಿ; ಯುವತಿ ಸಹಿತ ಇಬ್ಬರ ಸಾವು | ಸಾರ್ವಜನಿಕರ ಆಕ್ರೋಶ
ಕಡಬ: ತಾಲೂಕಿನ ಮೀನಾಡಿ ಸಮೀಪ ಸೋಮವಾರ ಬೆಳ್ಳಂ ಬೆಳಗ್ಗೆ ನಡೆದ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಬೆಳಿಗ್ಗೆ ಹಾಲಿನ ಡೈರಿಗೆ ಹೋಗುತ್ತಿದ್ದ ಸಿಬ್ಬಂದಿ ರಂಜಿತಾ ಹಾಗೂ ರಮೇಶ್ ಎಂಬವರ ಮೇಲೆ ಕಾಡಾನೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದೆ.
ರಮೇಶ್ ಅವರು ತೀವ್ರವಾಗಿ ದಾಳಿಗೊಳಗಾಗಿದ್ದು ಹೊಟ್ಟೆ ಭಾಗ ತಿವಿದು ಕರುಳುಗಳು ಹೊರಬಂದಿವೆ. ಇನ್ನು ರಂಜಿತಾ ಅವರು ಗಾಯಗೊಂಡಿದ್ದು ಬಳಿಕ ನೆಲ್ಯಾಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಸಾರ್ವಜನಿಕರ ಆಕ್ರೋಶ:
ವಾರದ ಹಿಂದೆ ಮರ್ದಾಳದ ಸ್ಥಳೀಯ ಯುವಕನೊಬ್ಬ ಫೇಸ್ಬುಕ್ ನಲ್ಲಿ ಕಾಡಾನೆ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದರು. ಅದಾಗಲೇ ಪಂಚಾಯತ್ ಕಡಬ ಠಾಣೆಗೆ ದೂರು ನೀಡಿ ಆತನ ಮೇಲೆ ಕ್ರಮಕೈಗೊಳ್ಳುವಂತೆ ಮಾಡಿದ್ದರು. ಅಂದು ಠಾಣೆಗೆ ಕರೆಸಿಕೊಂಡ ಕಡಬ ಪೊಲೀಸರು ಆತನ ಬಳಿಯಿದ್ದ ಮಾಹಿತಿ, ವೀಡಿಯೋವನ್ನ ಡಿಲಿಟ್ ಮಾಡಿಸಿದ್ದಾಗಿ ತಿಳಿದು ಬಂದಿದೆ. ಇದೀಗ ಅದೇ ಠಾಣಾ ವ್ಯಾಪ್ತಿಯ ಮೀನಾಡಿಯಲ್ಲಿ ಭೀಕರ ಕಾಡಾನೆ ದಾಳಿ ನಡೆದು ಇಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಈ ಕುರಿತು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.