-->
IAS ವರ್ಸಸ್ IPS ಫೈಟ್; ರೋಹಿಣಿ ಸಿಂಧೂರಿ‌ ಖಾಸಗಿ ಫೋಟೋ ಹಂಚಿಕೊಂಡ ರೂಪ ಮೌಡ್ಗಿಲ್!

IAS ವರ್ಸಸ್ IPS ಫೈಟ್; ರೋಹಿಣಿ ಸಿಂಧೂರಿ‌ ಖಾಸಗಿ ಫೋಟೋ ಹಂಚಿಕೊಂಡ ರೂಪ ಮೌಡ್ಗಿಲ್!

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪ IPS ನಡುವಿನ  ಪೋಸ್ಟ್ ವಾರ್ ಮುಂದುವರೆದಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಡಿ. ರೂಪ ತನ್ನ ಫೇಸ್ಬುಕ್ ವಾಲ್ ನಲ್ಲಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ಹಂಚಿಕೊಂಡು ಕೆಲವೊಂದು ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಡಿ. ರೂಪ ಅವರು ಬಹಿರಂಗವಾಗಿ ರೋಹಿಣಿ ವಿರುದ್ಧ ಸಮರ ಸಾರಿದಂತಿದೆ.

ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ರೂಪ ಅವರು ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಇನ್ನು ಮತ್ತೊಂದೆಡೆ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಫೋಸ್ಟ್ ವಾರ್​​​ ವಿಚಾರಕ್ಕೆ ಸಂಬಂಧಿಸಿ ಐಪಿಎಸ್​ ಅಧಿಕಾರಿ ಡಿ.ರೂಪಾ ಪ್ರತಿಕ್ರಿಯೆ ನೀಡಿದ್ದಾರೆ. 


ಪುರುಷ ಐಎಎಸ್ ಅಧಿಕಾರಿಗಳಿಗೆ ಇಂತಹ ಪೋಸ್ಟ್ ಹಂಚುವ ಬಗ್ಗೆ ಚಕಾರ ಎತ್ತಿದ್ದಾರೆ. ಇದು ಐಎಎಸ್ ಸೇವಾ ನಿಯಮ ಪ್ರಕಾರ ಅಪರಾಧ ಎಂದಿದ್ದಾರೆ. ಈ ಮೂಲಕ ಖಾಸಗಿ ವಿಚಾರ ಜಗಜ್ಜಾಹೀರು ಆದಂತಾಗಿದೆ. 

ಇದಕ್ಕೂ ಮುನ್ನ ಶಾಸಕರ ಸಾರಾ ಮಹೇಶ್ ಜೊತೆ ರೋಹಿಣಿ ಸಿಂಧೂರು ಸಂಧಾನ ನಡೆಸಿರುವುದನ್ನೇ ಮುಂದಿಟ್ಟು 20 ಪ್ರಶ್ನೆಗಳನ್ನು ಕೇಳಿದ್ದರು.


 

Ads on article

Advertise in articles 1

advertising articles 2

Advertise under the article