ಮಂಗಳೂರು: ಫಾಝಿಲ್ ಹಂತಕರಿಗೆ ಹಣ ನೀಡುವಂತೆ ವ್ಯಕ್ತಿಗೆ ಬೆದರಿಕೆ; ಕೇಸು ದಾಖಲು
ಮಂಗಳೂರು: ಸುರತ್ಕಲ್
ನಿವಾಸಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಆರೋಪಿ ಹಣ ನೀಡುವಂತೆ
ವ್ಯಕ್ತಿಯೋರ್ವರಿಗೆ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸಂತ್ರಸ್ತ
ವ್ಯಕ್ತಿಯು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆಬ್ರವರಿ 2 ರಂದು ಮೊಬೈಲ್
ಕರೆ ಮಾಡಿದ ವ್ಯಕ್ತಿಯು ತನ್ನನ್ನು ತಾನು ಹರ್ಷಿತ್ ಎಂದು ಗುರುತಿಸಿಕೊಂಡಿದ್ದು, ‘‘ನಾನು ಫಾಝಿಲ್
ಕೊಲೆಯಲ್ಲಿ ಜೈಲಿಗೆ ಹೋಗಿ ಬಂದವನು. ನನಗೆ ಹಾಗೂ ಜೈಲಿನಲ್ಲಿ ಇರುವವರಿಗೆ (ಫಾಝಿಲ್ ಕೊಲೆ
ಆರೋಪಿಗಳಿಗೆ) ನೀವು ಹಣದ ಸಹಾಯ ಮಾಡಬೇಕು‘‘ ಎಂದು ಕೇಳಿಕೊಂಡಿದ್ಧಾನೆ. ಇದಕ್ಕೆ ವ್ಯಕ್ತಿಯು
ನಿರಾಕರಿಸಿದ್ದು, ನಂತರ ಪದೇ ಪದೇ ಕರೆ ಮಾಡಿದ್ದಲ್ಲದೇ ಹಣ ಕೊಡದಿದ್ದರೆ ಮುಂದೆ
ಸಮಸ್ಯೆಯಾಗಬಹುದು. ಅದಕ್ಕೆ ನಮ್ಮನ್ನ ದೂರಬೇಡಿ ಎಂದು ಬೆದರಿಕೆ ಹಾಕಿ ಮಾನಸಿಕವಾಗಿ ಕಿರುಕುಳ
ನೀಡಿದ್ದಾನೆ ಎಂದು ವ್ಯಕ್ತಿಯು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
| ಹರ್ಷಿತ್ |
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ಧಾರೆ.
ಬಂಟ್ವಾಳ ಮೂಲದ ಹರ್ಷಿತ್,
ಫಾಝಿಲ್ ಹತ್ಯೆಗೈದ ಹಂತಕರಿಗೆ ಆಶ್ರಯ ಒದಗಿಸಿರುವ ಆರೋಪ ಹೊತ್ತಿದ್ದಾನೆ. ಈತ ಕಳೆದ ಸೆಪ್ಟಂಬರ್
ತಿಂಗಳಿನಲ್ಲೇ ಜೈಲಿನಿಂದ ಹೊರ ಬಂದಿದ್ದನು.