ಮಂಗಳೂರು: ಫಾಝಿಲ್ ಸಹೋದರನ ಮೇಲೆ ಹಲ್ಲೆ; ಬಿಗುವಿನ ವಾತಾವರಣ
Wednesday, February 8, 2023
ಮಂಗಳೂರು: ಸುರತ್ಕಲ್ ನಿವಾಸಿ ಫಾಝಿಲ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಫಾಝಿಲ್ ಸಹೋದರನ ಮೇಲೆ ಕಾಟಿಪಳ್ಳದ ಗಣೇಶಪುರ ಬಳಿ ಹಲ್ಲೆ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಫಾಝಿಲ್ ಸಹೋದರ ಆದಿಲ್ ಮತ್ತು ನಾಗೇಶ್ ಎಂಬವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭ ನಾಗೇಶ್ ಹಾಗೂ ಸಂಗಡಿಗರಿಂದ ಫಾಝಿಲ್ ಸಹೋದರ ಆದಿಲ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸುರತ್ಕಲ್ ಠಾಣಾ ಪೊಲೀಸರು ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.