-->
MNG:  ಮಂಗಳೂರಿನ ಲಾಡ್ಜ್ ನಲ್ಲಿ ದಂಪತಿ ಮೃತದೇಹ ಪತ್ತೆ!!

MNG: ಮಂಗಳೂರಿನ ಲಾಡ್ಜ್ ನಲ್ಲಿ ದಂಪತಿ ಮೃತದೇಹ ಪತ್ತೆ!!



ಮಂಗಳೂರು: ಮಂಗಳೂರಿನ ಲಾಡ್ಜ್ ವೊಂದರಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿವೆ.

ಕೇರಳ ಮೂಲದ ರವೀಂದ್ರ (55) ಹಾಗೂ ಸುಧಾ (50) ಆತ್ಮಹತ್ಯೆಗೈದ ದಂಪತಿ ಎಂದು ತಿಳಿದುಬಂದಿದೆ. ಇವರು ಕೇರಳದ ತಳೀಪರಂಬು ನಿವಾಸಿ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಎರಡು ದಿನಗಳ ಹಿಂದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಟ್ಟೆ ವ್ಯಾಪಾರಿಗಳಾದ ಈ ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. 

ನಗರದ ಫಳ್ನೀರ್ ನ ನ್ಯೂ ಬ್ಲೂಸ್ಟಾರ್ ಲಾಡ್ಜ್ ನಲ್ಲಿ ದಂಪತಿ ಸೋಮವಾರ (6)ರಂದು ಕೊಠಡಿ ಪಡೆದಿದ್ದರು. ಎರಡು ದಿನಗಳಾದರೂ ಕೊಠಡಿಯಿಂದ ಯಾರು ಕೂಡ ಹೊರಬಾರದ ಹಿನ್ನೆಲೆಯಲ್ಲಿ ಸಂಶಯಗೊಂಡ ಲಾಡ್ಜ್ ಸಿಬ್ಬಂದಿ ಇಂದು ಬಾಗಿಲು ತೆರೆದು ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ತಕ್ಷಣ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article