BLT: ಉಜಿರೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ!!
ಬೆಳ್ತಂಗಡಿ: ಕರಾವಳಿಯಲ್ಲಿ ಮತ್ತೆ ರಾಜಾರೋಷವಾಗಿ ವೇಶ್ಯಾವಾಟಿಕೆ ದಂಧೆ ಕಾರ್ಯಾಚರಿಸುತ್ತಿದೆ. ಹೌದು ಕರ್ನಾಟಕ ವೇಶ್ಯಾವಾಟಿಕೆ ದಂಧೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗ್ಲೇ ಹಲವಾರು ಭಾರೀ ಈ ದಂಧೆಗೆ ಬ್ರೇಕ್ ಹಾಕಲು ಪೊಲೀಸರಿಗೆ ತಿಳಿಸಿದ್ರೂ, ಅದು ಮಾತ್ರ ಎಗ್ಗಿಲ್ಲದೇ ನಡೀತಾನೇ ಇವೆ. ಇದೀಗ ಬೆಳ್ತಂಗಡಿಯ ಉಜಿರೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೀತಾ ಇದೆ. ಇದಕ್ಕೆ ಹಲವಾರು ಭಾರೀ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದ್ರೆ ಮತ್ತೆ ಮತ್ತೆ ಇದು ಉಜಿರೆಯಲ್ಲಿ ಹೆಚ್ಚಾಗ್ತನೇ ಇತ್ತು. ಇದೀಗ ಪೊಲೀಸರ ಜೊತೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಉಜಿರೆಯೊಂದರ ಲಾಡ್ಜ್ ಗೆ ದಾಳಿ ಮಾಡಿದ್ದಾರೆ.
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಐವರು ಮಹಿಳೆಯರು ಹಾಗೂ ಇಬ್ಬರು ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆಯಷ್ಟೇ ಬಂಟ್ವಾಳ ಡಿವೈಎಸ್ಪಿ ನೇತೃತ್ವದ ತಂಡ ಲಾಡ್ಜ್ ಮಾಲೀಕರ ಸಭೆ ಕರೆದು ಎಚ್ಚರಿಕೆ ನೀಡಿತ್ತು. ಅದಾದ ಕೆಲವೇ ಹೊತ್ತಲ್ಲಿ ಈ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನ ತಿಮರೋಡಿ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಜೊತೆಗೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ದಾಳಿ ಬೆನ್ನಲ್ಲೇ ಉಜಿರೆಯ ಕೆಲ ಲಾಡ್ಜ್ ಗಳಲ್ಲಿ ನಡೀತಿದ್ದ ದಂಧೆಗೆ ಬ್ರೇಕ್ ಬಿದ್ದಿದೆ.