ರಾತ್ರಿ ಊಟ ಸವಿದ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ; 137 ಮಂದಿ ವಿವಿಧ ಆಸ್ಪತ್ರೆಗೆ ದಾಖಲು
ಮಂಗಳೂರು: ರಾತ್ರಿಯ ಊಟ ಸವಿದ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿನಿಯರು
ಅಸ್ವಸ್ಥರಾಗಿರುವ ಘಟನೆ ನಗರದ ಶಕ್ತಿನಗರದಲ್ಲಿ ನಡೆದಿದೆ. ಅಸ್ವಸ್ಥರಾಗಿರುವ ವಿದ್ಯಾರ್ಥಿನಿಯರನ್ನು
ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸಿಟಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಭಾನುವಾರ ರಾತ್ರಿ
ಹಾಸ್ಟೆಲ್ ನಲ್ಲಿ ಊಟ ಸವಿದಿದ್ದು ಆನಂತರ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ,
ಸೋಮವಾರ ರಾತ್ರಿ ಆರೋಗ್ಯದಲ್ಲಿ ತೀವ್ರ ಮಟ್ಟಿನ ಏರುಪೇರು ಕಂಡು ಬಂದಿದ್ದು 137 ವಿದ್ಯಾರ್ಥಿನಿಯರು
ಇಂದು ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಇದರಲ್ಲಿ ಕೆಲವರ ಆರೋಗ್ಯ ಕೊಂಚ ಮಟ್ಟಿನ ಗಂಭೀರವಾಗಿದ್ದು,
ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನರ್ಸಿಂಗ್ ವಿದ್ಯಾರ್ಥಿನಿಯರು ದಾಖಲಾಗಿರುವ ಆಸ್ಪತ್ರೆಗಳಿಗೆ ಪೊಲೀಸ್
ಕಮೀಷನರ್ ಎನ್. ಶಶಿಕುಮಾರ್ ಭೇಟಿ ನೀಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಎಜೆ ಆಸ್ಪತ್ರೆ
52, ಕೆಎಂಸಿ ಆಸ್ಪತ್ರೆ 18, ಯುನಿಟಿ 14, ಸಿಟಿ ಆಸ್ಪತ್ರೆ 8, ಮಂಗಳಾ ಆಸ್ಪತ್ರೆ 3 ಹಾಗೂ ಫಾದರ್
ಮುಲ್ಲರ್ ಆಸ್ಪತ್ರೆಯಲ್ಲಿ 42 ಮಂದಿ ದಾಖಲಾಗಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.