-->
ಮಂಗಳೂರಿನಲ್ಲಿ `ಜೈಲರ್' ಸಿನಿಮಾ ಶೂಟಿಂಗ್ ಆರಂಭ!

ಮಂಗಳೂರಿನಲ್ಲಿ `ಜೈಲರ್' ಸಿನಿಮಾ ಶೂಟಿಂಗ್ ಆರಂಭ!




ಮಂಗಳೂರು: ಜೈಲರ್ ಸಿನಿಮಾ ಶೂಟಿಂಗ್‌ಗಾಗಿ ಮಂಗಳೂರಿಗೆ ಬಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಪಿಲಿಕುಲದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 




ಖ್ಯಾತ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಜೈಲರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇಳಯ ದಳಪತಿ ವಿಜಯ್ ಅಭಿನಯದ ಬೀಸ್ಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನೆಲ್ಸನ್ ದಿಲೀಪ್ ಕುಮಾರ್ ಜೈಲರ್ ಚಿತ್ರಕ್ಕೆ ನಿರ್ದೇಶಕನಾಗಿದ್ದಾರೆ. ಇನ್ನು ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. 



ಈಗಾಗ್ಲೇ ಈ ಚಿತ್ರದ ಕೆಲವೊಂದು ಭಾಗಗಳ ಚಿತ್ರೀಕರಣ ಮಂಗಳೂರಿನ ಪಿಲಿಕುಲದಲ್ಲಿ ನಡೆಯುತ್ತಿದ್ದು, `ಕಾಂತಾರ' ಸಿನಿಮಾ ಚಿತ್ರೀಕರಣ ಮಾಡಿದ್ದ ಒಂದು ಮನೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ರಜನಿಕಾಂತ್ ಜೊತೆ ಶಿವರಾಜ್ ಕುಮಾರ್ ಕೂಡ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಈ ಜೈಲರ್ ಸಿನಿಮಾದಲ್ಲಿ ಶಿವಣ್ಣ ಅವರದ್ದು ಅತಿಥಿ ಪಾತ್ರ ಎನ್ನಲಾಗಿದೆ. 

Ads on article

Advertise in articles 1

advertising articles 2

Advertise under the article