
UDP: ಕಾರ್ಕಳಕ್ಕೆ ಪ್ರಮೋದ್ ಮುತಾಲಿಕ್ ಎಂಟ್ರಿ!!
Wednesday, January 18, 2023
ಕಾರ್ಕಳ: ಹಿಂದು ರೆಬೆಲ್, ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.
ಪ್ರಮೋದ್ ಮುತಾಲಿಕ್ ಹಿಂದುತ್ವದ ನಿಲುವನ್ನು ಪ್ರತಿಪಾದಿಸುತ್ತಾ ರಾಜ್ಯದ 224 ಕ್ಷೇತ್ರಗಳ ಪೈಕಿ ಕಾರ್ಕಳವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಮಕರ ಸಂಕ್ರಾಂತಿಯ ಶುಭ ಪರ್ವದಲ್ಲಿ ಹಿಂದುಗಳ ಪವಿತ್ರ ಸ್ಥಾನವಾದ ಅತ್ತೂರು ಪರ್ಪಲಗಿರಿಯ ದೈವ ಸಾನಿಧ್ಯದಲ್ಲಿ, ಹಿಂದುತ್ವದ ಗೆಲುವಿಗಾಗಿ ಶನಿವಾರ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮುಂದಿನ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸದಾ ಕಾರ್ಕಳಕ್ಷೇತ್ರದಲ್ಲಿದ್ದು, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ, ಮತದಾರರ ವಿಶ್ವಾಸವನ್ನು ಗೆಲ್ಲುವ ಮೂಲಕ ವಿಧಾನ ಸಭೆ ಪ್ರವೇಶಿಸುವಲ್ಲಿ ಅವರ ಪ್ರಯತ್ನ ಮುಂದುವರೆಯುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.