
DLH: ಮುಸ್ಲಿಂ ಸಮಾಜದ ಬಗ್ಗೆ ತಪ್ಪು ಹೇಳಿಕೆ ನೀಡ್ಬೇಡಿ!!
Wednesday, January 18, 2023
ನವದೆಹಲಿ: ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಮಹತ್ವದ ಸಂದೇಶವನ್ನ ಪಕ್ಷದವರಿಗೆ ರವಾನಿಸಿದ್ದಾರೆ. `ಮುಸ್ಲಿಂ ಸಮಾಜದ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡಬೇಡಿ. ಪಸ್ಮಾಂಡ ಮತ್ತು ಬೋರ ಸಮಾಜವನ್ನ ಭೇಟಿಯಾಗಬೇಕು ಎಂದಿದ್ದಾರೆ.
ಇನ್ನು ಕಾರ್ಮಿಕರೊಂದಿಗೆ ಸಂವಹನ ನಡೆಸಿ ಎಂದ ಪ್ರಧಾನಿ ಮೋದಿ, ಸಮಾಜದ ಎಲ್ಲಾ ವರ್ಗಗಳನ್ನ ಭೇಟಿ ಮಾಡಿ. ಅವ್ರು ನಮಗೆ ಮತ ಚಲಾಯಿಸುತ್ತಾರೋ ಅಥವಾ ಇಲ್ಲವೇ ಭೇಟಿ ಮಾಡಿ. ಪಕ್ಷದ ಅನೇಕರು ಈಗಲೂ ತಾವು ವಿರೋಧ ಪಕ್ಷದಲ್ಲಿದ್ದೇವೆ ಎಂಬ ಭಾವನೆಯಲ್ಲಿದ್ದಾರೆ. ಪಕ್ಷದ ಅನೇಕ ಜನರು ಸಭ್ಯ ಭಾಷೆಯಲ್ಲಿ ಮಾತನಾಡಬೇಕು ಎಂದು ಹೇಳಿದರು.