-->
MNG: ಮಂಗಳೂರಿನ ಸುರತ್ಕಲ್‌ನಲ್ಲಿ ಯುವತಿ ನಾಪತ್ತೆ..

MNG: ಮಂಗಳೂರಿನ ಸುರತ್ಕಲ್‌ನಲ್ಲಿ ಯುವತಿ ನಾಪತ್ತೆ..

 


ಮಂಗಳೂರು: ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದಿದೆ. ಮಣಪ್ಪುರಂ ಫೈನಾನ್ಸ್ ನ ಉದ್ಯೋಗಿ, ಕಮಲಾಕ್ಷ ಎಂಬವರ ಪುತ್ರಿ ಶಿವಾನಿ (20) ನಾಪತ್ತೆಯಾದ ಯುವತಿ. 

ಯುವತಿ ಜ.೧೬ರಂದು ಬೆಳಗ್ಗೆ ಕೆಲಸಕ್ಕೆಂದು ತೆರಳಿದ್ದಾರೆ. ಆದ್ರೆ ಸಂಜೆ ಪ್ರತಿನಿತ್ಯ ಬರುತ್ತಿದ್ದ ಶಿವಾನಿ ಆ ದಿನ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಇನ್ನು ಮನೆಯಿಂದ ಹೋದಾಗ ಹಸಿರು ಬಣ್ಣದ ಟಾಪ್ ಹಾಗೂ ಗೋಲ್ಡನ್ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಶಿವಾನಿಯನ್ನ ಕಂಡವರು ಸುರತ್ಕಲ್ ಠಾಣೆ(0824-2220540, 9480805360, 9480802345) ಇಲ್ಲವಾದಲ್ಲಿ ಮಂಗಳೂರು ನಗರ ಕಂಟ್ರೋಲ್ ರೂಮ್(0824-2220800)ಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 


Ads on article

Advertise in articles 1

advertising articles 2

Advertise under the article