MNG: ಕದ್ರಿ ಮಂಜುನಾಥ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗಿಲ್ಲ ಅವಕಾಶ!!
Thursday, January 19, 2023
ಮಂಗಳೂರು: ಕರಾವಳಿಯ ದೇವಸ್ಥಾನಗಳಲ್ಲಿ ಧರ್ಮದಂಗಲ್ ಮುಂದುವರೆದಿದ್ದು, ಅನ್ಯಧರ್ಮಿಯರಿಗೆ ದೇವಸ್ಥಾನಗಳ ಜಾತ್ರೋತ್ಸವ ಸಂದರ್ಭದಲ್ಲಿ ವ್ಯಾಪಾರಕ್ಕೆ ನಿಷೇಧ ಮುಂದುವರೆದಿದೆ. ಇದೀಗ ಕಾವೂರು ದೇವಸ್ಥಾನದ ಬಳಿಕ ಕದ್ರಿ ಮಂಜುನಾಥನ ಕ್ಷೇತ್ರಕ್ಕೂ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದ ಬಿಸಿ ತಟ್ಟಿದೆ.
ಕದ್ರಿಯ ಅಲ್ಲಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬ್ಯಾನರ್ ಅಳವಡಿಸಿದ್ದು, ಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊದಲು ಟಾರ್ಗೆಟ್ ಮಾಡಿದ್ದು ಇದೇ ಕದ್ರಿ ಮಂಜುನಾಥ ದೇವಸ್ಥಾನವನ್ನು, ಅಂತಹ ಮನಸ್ಥಿತಿ ಉಳ್ಳವರಿಗೆ ಮತ್ತು ವಿಗ್ರಹಾರಾಧನೆಯನ್ನು ಹರಮ್ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.
