-->
UDP: ಸೈಂಟ್ ಮೇರಿಸ್ - ದುಬಾರಿ ದೋಣಿ ವಿಹಾರ; ಸಿಬ್ಬಂದಿಗಳ ದರ್ಪ!!

UDP: ಸೈಂಟ್ ಮೇರಿಸ್ - ದುಬಾರಿ ದೋಣಿ ವಿಹಾರ; ಸಿಬ್ಬಂದಿಗಳ ದರ್ಪ!!


ಮಲ್ಪೆ: ಉಡುಪಿ ಅಂದರೆ ತಕ್ಷಣ ನೆನಪು ಆಗುವುದು ಉಡುಪಿ ಕೃಷ್ಣ ಮಠ ಮತ್ತು ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪ. ಪ್ರವಾಸಕ್ಕೆ ಬಂದ ಪ್ರವಾಸಿಗರು ಈ ಮೂರು ಸ್ಥಳಕ್ಕೆ ಭೇಟಿ ಕೊಡದೆ ವಾಪಸ್ಸು ಹೋಗುವುದೆ ಇಲ್ಲ. ಆದರೆ ಈಗ ಉಡುಪಿಗೆ ಬಂದ ಪ್ರವಾಸಿಗರು ಕೃಷ್ಣ ಮಠ ಮತ್ತು ಮಲ್ಪೆ ಬೀಚ್ ಗೆ ಭೇಟಿ ಕೊಟ್ಟು ವಾಪಸ್ಸು ಹೋಗುತ್ತಿದ್ದಾರೆ. ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುವವರ ಸಂಖ್ಯೆಯೇ ಕಡಿಮೆ‌ಯಾಗಿದೆ. ಅಷ್ಟಕ್ಕೂ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ಕಾರಣವು ಇದೆ.


ದುಬಾರಿಯಾಗುತ್ತಿದೆ ಪ್ರವಾಸಿಗರ ಸ್ವರ್ಗ!! 

ಹೌದು ಮಲ್ಪೆಗೆ ಹೆಚ್ಚಿನ ಪ್ರವಾಸಿಗರು ಬರುವುದು ಮಲ್ಪೆಯಲ್ಲಿರುವ ಐಲ್ಯಾಂಡ್ ನೋಡಲು, ಆದರೆ ಈಗ ಐಲ್ಯಾಂಡ್ ಹೋಗುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಏಕೆಂದರೆ ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುವ ದೋಣಿಯ ವೆಚ್ಚೆ ದುಬಾರಿ ಮತ್ತು ಐಲ್ಯಾಂಡ್ ನಲ್ಲಿ ಸಿಗುವ ಸ್ನ್ಯಾಕ್ಸ್ ಗಳ ಬೆಲೆಯು ತುಂಬಾ ದುಬಾರಿ. ಇಷ್ಟು ಹಣಕೊಟ್ಟು ಅಲ್ಲಿಗೆ ಹೋದ್ರು ಪ್ರವಾಸಿಗರ ಪ್ರವಾಸ ವ್ಯರ್ಥ ಆಗುವುದರಲ್ಲಿ ಸಂಶಯನೇ ಇಲ್ಲ. ಏಕೆಂದರೆ ಅಲ್ಲಿ ಸಮುದ್ರಕ್ಕೆ ಇಳಿದು ಎಂಜಾಯ್ ಮಾಡಲು ಅನುಮತಿಯೇ ಇಲ್ಲ. 




ಪ್ರವಾಸಿಗರ ಮೇಲೆ ಸಿಬ್ಬಂದಿಗಳ ದರ್ಪ!!

ಇನ್ನೂ ದುಬಾರಿ ಪ್ರವಾಸ ವೆಚ್ಚದ ನಡುವೆ ಸಿಬ್ಬಂದಿಗಳ ದರ್ಪವು ಜೋರಾಗಿದೆ. ಹೌದು ಇತ್ತೀಚೆಗೆ ಒಬ್ಬ ಯೂಟ್ಯೂಬರ್ ಮಲ್ಪೆ ಐಲ್ಯಾಂಡ್ ಗೆ ಹೋದ‌ ಸಮಯದಲ್ಲಿ ಅವನ‌ ಮೇಲೆಯು ಹಲ್ಲೆ ಮಾಡಲು ಅಲ್ಲಿಯ ಸಿಬ್ಬಂದಿಗಳ ಮುಂದಾಗಿದ್ದರು. ಅ ವಿಡಿಯೋ ತುಣುಕನ್ನು ತನ್ನ ಯೂಟ್ಯೂಬ್ ಪೇಜ್ ನ‌ಲ್ಲಿ ಹಾಕಿ ಉಡುಪಿ ಐ ಲ್ಯಾಂಡ್ ಸಿಬ್ಬಂದಿಯ ದರ್ಪವನ್ನು ಎಳೆ ಎಳೆಯಾಗಿ ತೋರಿಸಿದ್ದಾನೆ ಈ ಲಿಂಕ್ ನ್ನು ನೋಡಿ.... https://fb.watch/i5k6v-rerq/

ಒಟ್ಟಿನಲ್ಲಿ ದುಬಾರಿಯಾಗುತ್ತಿರುವ  ಐ ಲ್ಯಾಂಡ್ ಪ್ರವಾಸದ ನಡುವೆ ಇಲ್ಲಿಯ ಸಿಬ್ಬಂದಿಗಳ ದರ್ಪವು ಜೋರಾಗುತ್ತಿದೆ. ಇದೇ ರೀತಿ ಮುಂದುವರಿಯುತ್ತ ಹೋದಲ್ಲಿ ಮುಂದೆ ಐ ಲ್ಯಾಂಡ್ ಅಥವಾ ಮಲ್ಪೆ ಬೀಚ್ ಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವುದರಲ್ಲಿ ಸಂಶಯ ಇಲ್ಲ. 

Ads on article

Advertise in articles 1

advertising articles 2

Advertise under the article