FILM: ಇಳಯ ದಳಪತಿ ವಿಜಯ್ ಜೊತೆ ರಕ್ಷಿತ್ ಶೆಟ್ಟಿ?
Tuesday, January 17, 2023
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದಲ್ಲೊಂದು ಸುದ್ದಿ ಚಿತ್ರ ಪ್ರೇಮಿಗಳನ್ನ ಹುಬ್ಬೇರಿಸುತ್ತಿದೆ. ಅಂತದ್ದೇ ಒಂದು ಸುದ್ದಿ ಇದೀಗ ಸಿನಿ ಪ್ರೇಮಿಗಳಲ್ಲಿ ಭಾರೀ ಚರ್ಚೆಯನ್ನ ಹುಟ್ಟುಹಾಕಿದೆ. ಹೌದು ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಕನ್ನಡದ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಸ್ವತಃ ನಿರ್ದೇಶಕ ಲೋಕೇಶ್ ಕನಕರಾಜ್ ಸುಳಿವೊಂದನ್ನ ಬಿಟ್ಟುಕೊಟ್ಟಿದ್ದಾರೆ.
ದಳಪತಿ ವಿಜಯ್ ನಟನೆಯ ಮುಂದಿನ ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸೋದು ಬಹುತೇಕ ಪಕ್ಕಾ ಆಗಿದೆ. ಇನ್ನೂ ಈ ಬಗ್ಗೆ ರಕ್ಷಿತ್ ಶೆಟ್ಟಿ ಇನ್ನೂ ದೃಢಪಡಿಸಿಲ್ಲ. ಇನ್ನು ಈ ಚಿತ್ರದಲ್ಲಿ ವಿವಿಧ ಚಿತ್ರರಂಗದ ಸ್ಟಾರ್ ನಟರು ಅಭಿನಯಿಸಲಿದ್ದಾರೆ. ಮಲಯಾಳಂನ ಖ್ಯಾತ ನಟ ನಿವಿನ್ ಪೌಲಿ, ಪೃಥ್ವಿರಾಜ್ ಸುಕುಮಾರನ್, ಬಾಲಿವುಡ್ ನ ಸಂಜಯ್ ದತ್ ಹಾಗೂ ನಾಯಕಿಯಾಗಿ ತ್ರಿಶಾ ಕೃಷ್ಣನ್, ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂದು ಸುದ್ದಿ ಹರಿದಾಡಿದೆ.