MNG: ಬಜರಂಗದಳಕ್ಕೆ ಗುಡ್ ಬೈ ಹೇಳಿದ ರಘು ಸಕಲೇಶಪುರ!!
Saturday, January 14, 2023
ಮಂಗಳೂರು: ಹಿಂದುತ್ವದ ಫಯರ್ ಬ್ರಾö್ಯಂಡ್, ಬಜರಂಗದಳ ಪ್ರಾಂತ ಸಂಚಾಲಕರಾಗಿರುವ ರಘು ಸಕಲೇಶಪುರ ಬಜರಂಗದಳಕ್ಕೆ ಗುಡ್ ಬೈ ಹೇಳಿದ್ದಾರೆ.
ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನನ್ನ ವೈಯಕ್ತಿಕ ಕಾರಣ ಮತ್ತು ಮನೆ ಸಮಸ್ಯೆಯಿಂದ ಬಜರಂಗದಳ ಜವಾಬ್ದಾರಿಯಿಂದ ಮುಕ್ತಿಗೊಂಡಿದ್ದೀನಿ. ಸುದೀರ್ಘ ಕಾರ್ಯಕರ್ತರ ಸಹಕಾರಕ್ಕೆ ಧನ್ಯವಾದಗಳು, ಹಿರಿಯರ ಮಾರ್ಗದರ್ಶನಕ್ಕೆ ಧನ್ಯವಾದಗಳು ಅಂತ ಬರೆದುಕೊಂಡಿದ್ದಾರೆ.
ಈ ಹಿಂದೆ ಹಲವಾರು ಹಿಂದುತ್ವದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಇವರು, ಏಕಾಏಕಿ ಬಜರಂಗದಳಕ್ಕೆ ಗುಡ್ ಬೈ ಹೇಳಿ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.
