ಕಾರ್ಕಳ: ಮೈದಾನದಲ್ಲಿ ಧೂಳಿನ ರಾಶಿ ಹೊತ್ತು ಆಕಾಶಕ್ಕೆ ಚಿಮ್ಮಿದ ಸುಳಿಗಾಳಿ; ವೀಡಿಯೋ ವೈರಲ್
Sunday, January 29, 2023
ಉಡುಪಿ: ಕ್ರಿಕೆಟ್ ಪಂದ್ಯಕೂಟದ ವೇಳೆ ಮೈದಾನದಲ್ಲಿ ಸುಳಿಗಾಳಿಯಿಂದ ಕೆಲ ಹೊತ್ತು ಪಂದ್ಯ ಸ್ಥಗಿತಗೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಏಕಾಏಕಿ ಮೈದಾನದಲ್ಲಿ ಎದ್ದ ಸುಳಿಗಾಳಿಯು ಒಂದೇ ಸಮನೆ ಆಕಾಶದತ್ತ ಮುಖ ಮಾಡಿ ವೇಗವಾಗಿ ಧೂಳು ರಾಶಿಯನ್ನ ಹೊತ್ತು ಸಾಗಿತು. ಈ ಸಂದರ್ಭ ಕೆಲ ಹೊತ್ತು ಪಂದ್ಯ ಸ್ಥಗಿತಗೊಂಡಿತು. ನೆರೆದವರು ಧೂಳಿನ ಸುಳಿಗಾಳಿ ಕಂಡು ದಂಗಾದರು. ಮೈದಾನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೇಲ್ಮುಖವಾಗಿ ಸಂಚರಿಸುವ ಸುಳಿಗಾಳಿ ಪ್ರಕೃತಿಯ ವಿಸ್ಮಯಕ್ಕೂ ಕಾರಣವಾಗಿದೆ. ಇದನ್ನ ಆಟಗಾರರು, ಪ್ರೇಕ್ಷಕರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.
ವೀಡಿಯೋ ವೀಕ್ಷಿಸಿ