MANGALORE: ಮಂಗಳೂರು ಉತ್ತರಕ್ಕೆ SDPI ಪ್ರಬಲ ನಾಯಕ!!
ಮಂಗಳೂರು: ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಾವು ಬಲು ಜೋರಾಗಿದೆ. ಕರಾವಳಿಯಲ್ಲಂತೂ ಟಿಕೆಟ್ ಆಕಾಂಕ್ಷಿಗಳದ್ದೇ ಕಾರುಬಾರು. ಅಂತದ್ರಲ್ಲಿ ಇದೀಗ ಮತ್ತೆ ಮಂಗಳೂರು ಉತ್ತರ ಕ್ಷೇತ್ರ ಮುನ್ನೆಲೆಗೆ ಬಂದಿದೆ. ಬಿಜೆಪಿಯಿಂದ ಶಾಸಕ ಭರತ್ ಶೆಟ್ಟಿ ಕನ್ಫರ್ಮ್ ಆದ್ರೆ ಇತ್ತ ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ಜೋರಾಗಿದೆ.
ಕಾಂಗ್ರೆಸ್ ನಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವ ಪರ ಕ್ಷೇತ್ರದಲ್ಲಿ ಒಲವು ಕಂಡುಬಂದ್ರೆ. ಅತ್ತ ಯುವ ನಾಯಕ ಇನಾಯತ್ ಅಲಿ ಓಡಾಟ ಕೇತ್ರದಲ್ಲಿ ಜೋರಾಗಿದೆ. ಇವರಿಬ್ಬರ ಜೊತೆ ಕಾಂಗ್ರೆಸ್ ನ ಪ್ರತಿಭಾ ಕುಲಾಯಿ ಅವರ ವರ್ಚಸ್ಸು ಕೂಡಾ ಇದೆ. ಇದರಿಂದಾಗಿ ಕಾಂಗ್ರೆಸ್ ಗೆ ಈ ಮೂವರಲ್ಲಿ ಯಾರಿಗೆ ಟಿಕೆಟ್ ಅನ್ನೋದು ತಲೆನೋವಾಗಿದೆ. ಆದ್ರೆ ಮೂಲಗಳ ಪ್ರಕಾರ ಯುವ ನಾಯಕ ಇನಾಯತ್ ಅಲಿಯನ್ನ ಕಣಕ್ಕೆ ಇಳಿಸೋದು ಪಕ್ಕಾ ಅಂತ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ. ಹಾಗಾಗಿ ಈ ಬಾರೀ ಮಂಗಳೂರು ಉತ್ತರಕ್ಕೆ ಎಸ್‌ಡಿಪಿಐನಿಂದ ಓರ್ವ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.
ಇತ್ತೀಚೆಗಷ್ಟೇ ಮೊಯ್ದೀನ್ ಬಾವ ಅವರಿಗೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ನೀಡಿದಲ್ಲಿ, ಎಸ್‌ಡಿಪಿಐ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ ಅಂತ ತೀರ್ಮಾನಿಸಿತ್ತು. ಆದ್ರೆ ಇದೀಗ ಇನಾಯತ್ ಅಲಿಗೆ ಟಿಕೆಟ್ ಎಂಬ ಘೋಷಣೆಯೊಂದೇ ಕಾಂಗ್ರೆಸ್ ಹೈಕಮಾಂಡ್ ನಿಂದ ಬರಬೇಕಿದೆ. ಹಾಗಾಗಿ ಎಸ್‌ಡಿಪಿಐ ಕೂಡ ಇನಾಯತ್ ಅಲಿ ವಿರುದ್ಧ ತೊಡೆತಟ್ಟಲು ಮುಂದಾಗಿದೆ. ಎಸ್‌ಡಿಪಿಐನಿಂದ ಪ್ರಬಲ ನಾಯಕ ಅಥಾವುಲ್ಲಾ ಜೋಕಟ್ಟೆ ಅಥವಾ ಅಶ್ರಫ್ ಮಾಚಾರ್ ಅವರನ್ನ ಕಣಕ್ಕಿಳಿಸಲು ಪಕ್ಷ ಮುಂದಾಗಿದೆ. ಹಾಗಾಗಿ ಮಂಗಳೂರು ಉತ್ತರದಲ್ಲಿ ಮತ್ತೆ ಬಿಜೆಪಿಗೆ ಲಾಭ ಆಗೋ ಸಾಧ್ಯತೆನೇ ಹೆಚ್ಚು ಅಂತ ರಾಜಕೀಯ ಪಂಡಿತರು ಹೇಳ್ತಾ ಇದ್ದಾರೆ.
