ಲವ್ ಜಿಹಾದ್ ಮಾಡಿದ್ರೆ ಎಲ್ಲಿಗೆ ಕಳುಹಿಸ್ಬೇಕೋ.. ಪುನಃ ಅಲ್ಲಿಗೆ ಕಳುಹಿಸ್ತೀನಿ: ಭರತ್ ಶೆಟ್ಟಿ ಖಡಕ್ ವಾರ್ನಿಂಗ್!
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಜನತಾ ಸಂಕಲ್ಪ ಅಭಿಯಾನದ ಕಾವೂರು ಕಾರ್ಯಕ್ರಮದಲ್ಲಿ ಮಂಗಳೂರು ನಗರ ಉತ್ತರ ಶಾಸಕ ಲವ್ ಜಿಹಾದ್ ವಿರುದ್ಧ ಕಿಡಿಕಾರುತ್ತಾ ಮುಸ್ಲಿಮ್ ಯುವಕರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಮೊಯ್ದಿನ್
ಬಾವಾ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿ ವೊಂದರ ಕುರಿತು ವ್ಯಂಗ್ಯವಾಗಿ ಮಾತನಾಡಿದ ಅವರು,
ಕಾಂಗ್ರೆಸ್ ರ್ಯಾಲಿಗೆ ಹೋಗಿದ್ದ ಜೋಕಟ್ಟೆಯ ಯುವಕರಿಗೆ ಮೊಯ್ದಿನ್ ಬಾವಾ ಅವರು 2 ಸಾವಿರ ರೂ. ಕೊಟ್ಟಿದ್ದಾರಂತೆ.
ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಚೀಟಿ ಕೊಟ್ಟಿದ್ದಾರಂತೆ. ಮೊದಲ ಬಾರಿಗೆ ಮೊಯ್ದಿನ್ ಬಾವಾ ನೀಡಿದ
ಚೀಟಿ ಪಾಸ್ ಆಗಿದೆಯಂತೆ. ಹಿಂದೆ ಯಾವತ್ತೂ ಅವರು ನೀಡಿದ ಚೆಕ್ ಪಾಸ್ ಆದದ್ದು ನನಗೆ ಗೊತ್ತಿಲ್ಲ. ಪರ್ವಾಗಿಲ್ಲ,
ಇದು ಅವರವರ ರಾಜಕೀಯ.. ಮಾಡಲಿ‘‘ ಎಂದರು.
ಮುಂದುವರೆದು
ಮಾತನಾಡಿದ ಭರತ್ ಶೆಟ್ಟಿ, ಬೈಕ್ ನಲ್ಲಿ ಪೆಟ್ರೋಲ್ ಇದೆ ಅಂದ್ಕೊಂಡು ಓಡಾಟ ಮಾಡ್ತಾ ಮಾಡ್ತಾ ಲವ್ ಜಿಹಾದ್
ಮಾಡಿದ್ರೆ ನಿಮ್ಮನ್ನ ಎಲ್ಲಿಗೆ ಕಳಿಸ್ಬೇಕೋ ಪುನಃ ಅಲ್ಲಿಗೆ ಕಳಿಸ್ತೇನೆ ನೆನಪಿಡಿ. ಬೈಕ್ ಗೆ ಪೆಟ್ರೋಲ್
ಸಿಕ್ಕಿದೆ ಅಂತಾ ಹುಡುಗಿಯರ ಉಪಟಳಕ್ಕೆ ಬಂದ್ರೆ ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿಕೆ
ನೀಡಿದ್ದಾರೆ.
ಅಲ್ಲದೇ, ನನಗೆ
ರಾಷ್ಟ್ರ ಭಕ್ತರ ವೋಟ್ ಸಿಕ್ಕಿದ್ರೆ ಸಾಕು, ರಾಷ್ಟ್ರ ದ್ರೋಹಿಗಳದ್ದು ಬೇಡ ಎಂದಿದ್ದಾರೆ.