ವೈದ್ಯಲೋಕದ ಗಾಂಜಾ ಘಾಟು; ಮತ್ತೆ 9 ಮಂದಿ ಬಲೆಗೆ!
Saturday, January 21, 2023
ಮಂಗಳೂರು: ವೈದ್ಯಲೋಕದ ಗಾಂಜಾ ಘಾಟಿನ ಬೆನ್ನತ್ತಿ ಹೊರಟಿರುವ ಮಂಗಳೂರು ನಗರ ಪೊಲೀಸರ ಬಲೆಗೆ ಮತ್ತೆ 9 ಮಂದಿ ಬಿದ್ದಿದ್ದು, ಬಂಧಿತರಲ್ಲಿ ಮೂವರು ಮಹಿಳಾ ವೈದ್ಯರು ಸೇರಿದ್ದಾರೆ.
ಬಂಧಿತರೆಲ್ಲರೂ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಶ್ರೀನಿವಾಸ್, ಕೆಎಂಸಿ ಹಾಗೂ ದುರ್ಗಾ ಸಂಜೀವಿನಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಇನ್ನು ಕೆಲವರು ಇಂಟರ್ನ್ ಶಿಪ್ ನಡೆಸುತ್ತಿದ್ದರು ಎಂದು ಗೊತ್ತಾಗಿದೆ.
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಡಾ. ವಿದುಶ್ ಕುಮಾರ್ , ಡಾ. ಶರಣ್ಯ, ಡಾ. ಸಿದ್ದಾರ್ಥ್ ಪಾವಸ್ಕರ್, ಡಾ. ಸೂರ್ಯಜಿತ್ ದೇವ್, ಡಾ. ಆಯಿಶಾ ಮೊಹಮ್ಮದ್, ಡಾ. ಪ್ರಣಯ್ ನಟರಾಜ್, ಡಾ. ಚೈತನ್ಯ ಆರ್., ಡಾ. ಸುಧೀಂದ್ರ, ಡಾ. ಇಶಾ ಮಿಡ್ಡಾ ಬಂಧಿತರು.