ಜಲೀಲ್ ಕರೋಪಾಡಿ ಹತ್ಯೆ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದೇ ಅಶೋಕ್ ರೈ; ಚರ್ಚೆಗೀಡಾದ ‘ಕೈ‘ ನಾಯಕನ ಕಾಮೆಂಟ್!
ಪುತ್ತೂರು: ಪುತ್ತೂರು ಕಾಂಗ್ರೆಸ್ ನಿಂದ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಹಾಗೂ ಕಟ್ಟಾ ಬಿಜೆಪಿ ಬೆಂಬಲಿಗ, ಉದ್ಯಮಿ ಅಶೋಕ್ ರೈ ಅವರಿಗೆ ಟಿಕೆಟ್ ಬಹುತೇಕ ಫಿಕ್ಸ್ ಅನ್ನೋದು ಗೊತ್ತಾಗಿದೆ. ಈಗಾಗಲೇ ಕೆಪಿಸಿಸಿ ನಾಯಕರು ಕೂಡಾ ಅಶೋಕ್ ರೈ ಅವರ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ. ಇನ್ನೇನು ಎರಡು ದಿನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಶೋಕ್ ರೈ ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ‘ದಿ ನ್ಯೂಸ್ ಅವರ್‘ ಗೆ ಲಭ್ಯವಾಗಿದೆ.
ಆದರೆ, ಇದು ಬಿಜೆಪಿ ವಲಯಕ್ಕಿಂತಲೂ ಪುತ್ತೂರು ಕಾಂಗ್ರೆಸ್ ವಲಯದಲ್ಲಿ
ಹೆಚ್ಚು ಸಂಚಲನ ಸೃಷ್ಟಿಸಿದೆ. ಈಗಾಗಲೇ ಮೂಲ ಕಾಂಗ್ರೆಸ್ಸಿಗರು ಅಶೋಕ್ ರೈ ಕಾಂಗ್ರೆಸ್ ಸೇರ್ಪಡೆ ಹಾಗೂ
ಅವರಿಗೆ ಟಿಕೆಟ್ ನೀಡುವುದಕ್ಕೆ ವಿರೋಧಿಸಿದ್ದಾರೆ. ವಿಶೇಷವಾಗಿ ಕಾವು ಹೇಮನಾಥ ಶೆಟ್ಟಿ ಬೆಂಬಲಿಗರು
ಹಾಗೂ ಮುಸ್ಲಿಂ ಸಮುದಾಯದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಿಂದ
ಗೆದ್ದರು ಸಂಘ ಪರಿವಾರದ ಸಖ್ಯದಿಂದ ಅವರು ಆಪರೇಷನ್ ಆಗುವ ಭೀತಿಯೂ ಕಾಂಗ್ರೆಸ್ ಗೆ ತಪ್ಪಿದ್ದಲ್ಲ.
ಜಲೀಲ್ ಕರೋಪಾಡಿ
ಹತ್ಯೆಗೆ ಲಿಂಕ್!?
ಸಂಘ ಪರಿವಾರದ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಿದ್ದವರಲ್ಲಿ ಅಶೋಕ್
ರೈ ಒಬ್ಬರು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಅಲ್ಲದೇ, ಪುತ್ತೂರಿನಲ್ಲಿ ನಡೆಯುತ್ತಿದ್ದ ಪ್ರತೀ
ಹಿಂದೂ ಸಮಾಜೋತ್ಸವಕ್ಕೂ ಇದೇ ಅಶೋಕ್ ರೈ ಹಣ ಸುರಿಯುತ್ತಿದ್ದರು ಅನ್ನೋದಾಗಿ ‘ಕೈ‘ ಪಕ್ಷದ ಸ್ಥಳೀಯ
ಮುಖಂಡನೇ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡ ಹಾಗೂ ಕರೋಪಾಡಿ ಗ್ರಾಮ
ಪಂಚಾಯತ್ ಉಪಾಧ್ಯಕ್ಷನಾಗಿದ್ದ ಜಲೀಲ್ ಕರೋಪಾಡಿ ಅವರ ಹತ್ಯೆ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದು
ಇದೇ ಅಶೋಕ್ ರೈ ಎಂದು ಪುತ್ತೂರು ನಗರ ಯೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋನು ಬಪ್ಪಳಿಗೆ ಎಂಬವರು
ಫೇಸ್ಬುಕ್ ಪೋಸ್ಟ್ ವೊಂದಕ್ಕೆ ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಇದು ಸದ್ಯ ಪುತ್ತೂರು ಕಾಂಗ್ರೆಸ್
ನಲ್ಲಿ ಭಾರೀ ಚರ್ಚೆಗೀಡಾಗಿದೆ. ಮಾತ್ರವಲ್ಲದೇ, ಅಶೋಕ್ ರೈ ವಿರುದ್ಧ ಮುಸ್ಲಿಂ ವೋಟ್ ಚಲಾವಣೆ ಆಗಲು
ಕಾಂಗ್ರೆಸ್ ಕಾರ್ಯಕರ್ತನೇ ಕಾರಣವಾಗುವ ಸಾಧ್ಯತೆಯೂ ಇದೆ. ಹಾಗಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ಒಳಜಗಳ
ಹೆಚ್ಚಾಗುತ್ತಿದ್ದಂತೆ, ಪುತ್ತೂರು ಬಿಜೆಪಿಯಲ್ಲಿ ಕಾದು ನೋಡುವ ತಂತ್ರಗಾರಿಕೆ ಮುಂದುವರೆದಿದೆ.
![]() |
| ಯುವ ಕಾಂಗ್ರೆಸ್ ಮುಖಂಡ ಮೋನು ಬಪ್ಪಳಿಗೆ |
| ಜಲೀಲ್ ಕರೋಪಾಡಿ ಹತ್ಯಾ ಆರೋಪಿಗಳು |
ಇತ್ತೀಚೆಗಿನವರೆಗೂ ಅಶೋಕ್ ರೈ ಬಿಜೆಪಿ ಪರ ಪೋಸ್ಟ್ ಹಾಕುತ್ತಿದ್ದರು. ಮಾತ್ರವಲ್ಲದೇ ಫೇಸ್ಬುಕ್ ನಲ್ಲಿ ಮೋದಿ, ಬಿಜೆಪಿ ಹೊಗಳಿ ಮಾಡಿರುವ ಪೋಸ್ಟ್ ಗಳನ್ನು ಅವರು ಇನ್ನೂ ಅಳಿಸದೇ ಇರೋದು ಕೂಡಾ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
.jpeg)

