ಹಿಂದೂಗಳ ಜಾತ್ರೆಯಲ್ಲಿ ಬೇರೆಯವರಿಗೆ ಏನು ಕೆಲಸ?: ಕದ್ರಿ ಬ್ಯಾನರ್ ತೆರವು ಬೆನ್ನಲ್ಲೇ ಪುನೀತ್ ಅತ್ತಾವರ ಪ್ರಶ್ನೆ
ಮಂಗಳೂರು:
ಕಾವೂರು ಹಾಗೂ ಕದ್ರಿ ದೇಗುಲಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸದಂತೆ
ತಾಕೀತು ಮಾಡುವ ಬ್ಯಾನರ್ ಗಳನ್ನು ಪೊಲೀಸರು ತೆರವುಗೊಳಿಸಿದ ಬೆನ್ನಲ್ಲೇ ಮಂಗಳೂರು ಬಜರಂಗದಳ ಜಿಲ್ಲಾ
ಸಂಚಾಲಕ ಪುನೀತ್ ಅತ್ತಾವರ, ‘‘ಹಿಂದೂಗಳ ಜಾತ್ರೆಯಲ್ಲಿ ಬೇರೆಯವರಿಗೆ ಏನು ಕೆಲಸ?‘‘ ಎಂದು ಪ್ರಶ್ನಿಸಿ
ಟ್ವೀಟ್ ಮಾಡಿದ್ದಾರೆ.
ಪರೋಕ್ಷವಾಗಿ ಮುಸ್ಲಿಂ ವ್ಯಾಪಾರಿಗಳ ಕುರಿತು ಅವರು ಮಾಡಿರುವ ಟ್ವೀಟ್ ನಲ್ಲಿ, ‘‘ಹಿಂದೂಗಳ ಜಾತ್ರೆ , ಹಿಂದುಗಳ ದೇವರು ,ಹಿಂದುಗಳ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಹಿಂದುಗಳು ಭಾಗವಹಿಸುವಾಗ ಬೇರೆಯವರಿಗೆ ಹಿಂದೂಗಳ ದೇವಸ್ಥಾನದ ಜಾತ್ರೆಯಲ್ಲಿ ಏನು ಕೆಲಸ? ಅರ್ಥ ಮಾಡಿಕೊಂಡರೆ ಒಳ್ಳೆಯದು...‘‘ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಬಜರಂಗದಳ ಹೆಸರಿನ
ಪೋಸ್ಟರ್ ಕೂಡಾ ಟ್ವೀಟ್ ನಲ್ಲಿ ಲಗತ್ತಿಸಿರುವ ಪುನೀತ್, ನನ್ನ ದೇವರು ಬಿಟ್ಟರೆ ಬೇರೆ ಎಲ್ಲಾ ಸುಳ್ಳು.
ವಿಗ್ರಹ ಆರಾಧನೆ ನಿಷೇಧ ಎಂದು ಸಾರುವ, ನಾವು ನಡೆಸುವ ಜಾತ್ರೆಯಲ್ಲಿನ ಶಕ್ತಿಯನ್ನು ನಂಬದವರನ್ನು ಹೊರತುಪಡಿಸಿ,
ಮಿಕ್ಕೆಲ್ಲರಿಗೂ ಜಾತಿ ಬೇಧವಿಲ್ಲದೇ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.