.jpeg)
MNJ: ಕೊಲ್ಯದಲ್ಲಿ ಭೀಕರ ಕಾರು ಅಪಘಾತ; ಓರ್ವ ಸ್ಥಳದಲ್ಲೇ ದುರ್ಮರಣ
Monday, January 30, 2023
ಮಂಜೇಶ್ವರ: ಮಂಜೇಶ್ವರ ಗಡಿ ಪ್ರದೇಶದ ಸಮೀಪ ಕೊಲ್ಯ ಎಂಬಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿರುವುದಾಗಿ ಮಾಹಿತಿ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿ 66 ಕೊಲ್ಯದ ವಿಭಜಗಕ್ಕೆ ಕಾರು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಕುಂಜತ್ತೂರು ನಿವಾಸಿ ಸಯ್ಯದ್ ಎಂಬವರ ಪುತ್ರ ಆಹ್ಮದ್ ರಿಫಾಯಿ ಸಯ್ಯದ್ (24) ಮೃತ ದುರ್ದೈವಿ. ಈತನ ಸಂಬಂಧಿಕ ಉಪ್ಪಳ ನಿವಾಸಿ ಬಶ್ರ (22) ನನ್ನು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಪ್ರಯಾಣಿಕರು ಕೂಡಾ ಗಾಯಗೊಂಡಿದ್ದಾರೆ.