
MNG: ನಾಪತ್ತೆಯಾಗಿದ್ದವಳು ಪ್ರಿಯಕರನೊಂದಿಗೆ ಪತ್ತೆ!!
Monday, January 30, 2023
ಮಂಗಳೂರು: ಮನೆಯಿಂದ ಕೆಲಸಕ್ಕೆಂದು ತೆರಳಿದ್ದ ಯುವತಿ ನಾಪತ್ತೆಯಾಗಿ, ಇದೀಗ ತನ್ನ ಪ್ರೇಮಿಯೊಂದಿಗೆ ಮದುವೆಯಾಗಿ ಪತ್ತೆಯಾಗಿದ್ದಾಳೆ. ನಗರದ ಫೈನಾನ್ಸ್ ನಲ್ಲಿ ಉದ್ಯೋಗಿಯಾಗಿರುವ ಶಿವಾನಿ(20) ಪ್ರಿಯಕರನೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಪೊಲೀಸರು ತಂತ್ರಜ್ನಾನ ಮಾಹಿತಿ ಆಧಾರದಲ್ಲಿ ಪತ್ತೆಮಾಡಿ ಜೋಡಿಯನ್ನ ಕರೆತಂದಿದ್ದಾರೆ.
ಜ.24 ರಂದು ಕಂಕನಾಡಿ ಪೊಲೀಸರ ಮುಂದೆ ಹಾಜರಾಗಿದ್ದು, ತಾನು ಪ್ರೀತಿಸಿದವನನ್ನು ಮದುವೆಯಾಗಿದ್ದೇನೆ. ಆತನೊಂದಿಗೆಯೇ ಬಾಳಿ ಬದುಕುತ್ತೇನೆ ಎಂದು ಲಿಖಿತ ಹೇಳಿಕೆಯನ್ನ ನೀಡಿದ್ದಾಳೆ. ಈ ಜೋಡಿ ಮುಂಬೈಗೆ ತೆರಳಿತ್ತು. ಬಳಿಕ ಹಣದ ಸಮಸ್ಯೆ ಉಂಟಾಗಿದೆ. ಹಾಗಾಗಿ ತನ್ನಲ್ಲಿದ್ದ ಮೊಬೈಲ್ ಮಾರಾಟ ಮಾಡಿ ಆ ಹಣದಿಂದ ಸ್ವಲ್ಪ ದಿನ ಕಳೆದಿದ್ದರು. ಸ್ನೇಹಿತರ ಜೊತೆ ಸಂಪರ್ಕವಿದ್ದದನ್ನ ಪತ್ತೆ ಹಚ್ಚಿದ ಪೊಲೀಸರು ಯುಪಿಐ ಹಣವನ್ನು ಹಾಕಿದ ವಿಳಾಸ ಪತ್ತೆ ಮಾಡಿ ಜೋಡಿಯನ್ನ ಸಂಪರ್ಕ ಮಾಡಿದ್ದಾರೆ.