MNG: ಮಾಜಿ ಶಾಸಕ ಮೊಯ್ದೀನ್ ಬಾವಾಗೆ ಎಸ್‌ಡಿಪಿಐ ಬೆಂಬಲ??
ಮಂಗಳೂರು: ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಾವು ರಂಗೇರುತ್ತಿದೆ. ಕರಾವಳಿ ಭಾಗದಲ್ಲಂತೂ ದಿನಕ್ಕೊಂದು ರಾಜಕೀಯ ವಿಚಾರಗಳು ತಿರುವುಗಳನ್ನ ಕಾಣ್ತಾ ಇವೆ. ಅದಕ್ಕೊಂದು ಉದಾಹರಣೆ ಎಂಬಂತೆ ಮಂಗಳೂರು ಉತ್ತರದಲ್ಲಿ ಎಸ್‌ಡಿಪಿಐ ಪಕ್ಷ ಲೆಕ್ಕಾಚಾರಗಳನ್ನ ಹಾಕಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಚಿಂತಿಸತೊಡಗಿದೆ.
ಕಾರಣ ಇಷ್ಟೇ ಮಂಗಳೂರು ಉತ್ತರಕ್ಕೆ ಮೊದಲು ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆ ಆಗ್ಬೇಕಾಗಿದೆ. ಆ ಬಳಿಕ ಎಸ್‌ಡಿಪಿಐ ಪಕ್ಷ ಅಲ್ಲಿಗೆ ತನ್ನ ಅಭ್ಯರ್ಥಿಯನ್ನ ಹಾಕ್ಬೇಕೋ ಬೇಡ್ವೋ ಅನ್ನೋ ಲೆಕ್ಕಾಚಾರಕ್ಕಿಳಿದಿದೆ. ಅದರಲ್ಲೂ ಪ್ರಮುಖವಾಗಿ ಒಂದು ವೇಳೆ ಕಾಂಗ್ರೆಸ್ ಪಕ್ಷ ಮಂಗಳೂರು ಉತ್ತರಕ್ಕೆ ಇನಾಯತ್ ಅಲಿಯನ್ನ ಕಣಕ್ಕಿಳಿಸಿದ್ದೇ ಆದಲ್ಲಿ ಎಸ್‌ಡಿಪಿಐ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಮುಂದಾಗಿದೆ. ಆದ್ರೆ ಮಾಜಿ ಶಾಸಕ ಮೊಯ್ದಿನ್ ಬಾವಾಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್ ಆದಲ್ಲಿ ಎಸ್‌ಡಿಪಿಐ ಪಕ್ಷ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸುವುದಿಲ್ಲ ಎಂಬ ಮಾಹಿತಿಯೊಂದು ಎಸ್ಡಿಪಿಐ ಮೂಲಗಳಿಂದ THE NEWS HOUR ಗೆ ಲಭಿಸಿದೆ. ಈ ಲೆಕ್ಕಾಚಾರದಿಂದ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಸ್‌ಡಿಪಿಐ ಪಕ್ಷ ತಲೆನೋವಾಗಿ ಪರಿಣಮಿಸಿದೆ.
ಮೊಯ್ದೀನ್ ಬಾವಾಗೆ ಜನ ಬೆಂಬಲ: ಇನ್ನು ಮಾಜಿ ಶಾಸಕ ಮೊಯ್ದೀನ್ ಬಾವಾಗೆ ಮಂಗಳೂರು ಉತ್ತರದಲ್ಲಿ ಭಾರೀ ಜನ ಬೆಂಬಲವಿದೆ. ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಾವಾ ಮಾಡಿದಂತ ಜನಪರ ಯೋಜನೆಗಳೇ ಅದಕ್ಕೆ ಸಾಕ್ಷಿ. ಆದ್ರೆ ಮೊಯ್ದೀನ್ ಬಾವಾ ಸೋಲಿನ ಬಳಿಕ ಇದೀಗ ಮತದಾರರು ಬಾವಾ ಮಾಡಿದಂತ ಕೆಲಸಗಳನ್ನ ಮೆಲುಕು ಹಾಕ್ತಾ ಇದ್ದಾರೆ. ಹಾಗಾಗಿ ಈ ಭಾರೀ ಮೊಯ್ದಿನ್ ಬಾವಾ ಪರ ಮಂಗಳೂರು ಉತ್ತರ ಭಾಗದ ಮತದಾರರಲ್ಲಿ ಹೆಚ್ಚಿನ ಒಲವು ಕಾಣಸಿಗ್ತಿದೆ.