-->
ವೆನ್ಲಾಕ್ ಆಸ್ಪತ್ರೆ ಒಳರೋಗಿಗಳ ಜೊತೆಗಾರರಿಗೆ ಬೆಡ್ ವಿತರಿಸಿ ಮಗಳ ಬರ್ತ್ ಡೇ ಆಚರಿಸಿದ ಹೊಟೇಲ್ ಮಾಲಕಿ

ವೆನ್ಲಾಕ್ ಆಸ್ಪತ್ರೆ ಒಳರೋಗಿಗಳ ಜೊತೆಗಾರರಿಗೆ ಬೆಡ್ ವಿತರಿಸಿ ಮಗಳ ಬರ್ತ್ ಡೇ ಆಚರಿಸಿದ ಹೊಟೇಲ್ ಮಾಲಕಿ

 


ಮಂಗಳೂರು: ನಗರದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ವಿಶೇಷ ಊಟೋಪಚಾರದೊಂದಿಗೆ ಬೆಡ್ ಶೀಟ್ಗಳ ವಿತರಣೆ ಸೋಮವಾರ ನಡೆಯಿತು.

ಮಂಗಳೂರಿನ ಕಂಕನಾಡಿ ಮತ್ತು ಬೆಂದೂರ್ವೆಲ್ನಲ್ಲಿರುವ ಹಾವ್ ಹಾವ್ ಹೋಟೆಲ್ ಮಾಲಕಿ ರೋಝ್ ಅವರು ತಮ್ಮ ಪುತ್ರಿ ಮೆಲಿಸಾ ಅವರ ಹುಟ್ಟುಹಬ್ಬ ಅಂಗವಾಗಿ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರತಿದಿನ ರಾತ್ರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ಊಟ ನೀಡುವ ಕಾರುಣ್ಯ ಯೋಜನೆಗೆ ಸಾಥ್ ನೀಡಿದರು.



ಸಂದರ್ಭದಲ್ಲಿ ಒಟ್ಟು 415 ಮಂದಿಗೆ ವೆಜ್ ಬಿರಿಯಾನಿ, ಗ್ರೇವಿ, ಕಚಂಬರ್, ಪಾಯಸ, ಬಿಸ್ಕೀಟ್ ಹಾಗೂ ಬೆಡ್ಶೀಟ್ಗಳನ್ನು ವಿತರಿಸಲಾಯಿತು. ರೋಝ್ ಹಾಗೂ ಮೆಲೀಸ ಅವರನ್ನು ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್  ಹನೀಫ್ ಹಾಜಿ ಗೋಳ್ತಮಜಲು ಅಭಿನಂದಿಸಿದರು.

ಎಂ. ಫ್ರೆಂಡ್ಸ್ ಸದಸ್ಯರಾದ ಇಬ್ರಾಹಿಮ್ ನಂದಾವರ, ಆಶಿಕ್ ಕುಕ್ಕಾಜೆ, ಅಬ್ದುಲ್ ಖಾದರ್, ಸರ್ವನ್, ಸೌಹಾನ್ ಎಸ್‌.ಕೆ., ಸಿಬ್ಬಂದಿ ಅಶ್ಫಾಕ್ ಉಪಸ್ಥಿತರಿದ್ದರು. ಎಂ. ಫ್ರೆಂಡ್ಸ್ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಸ್ವಾಗತಿಸಿದರು.

Ads on article

Advertise in articles 1

advertising articles 2

Advertise under the article