MNG: ಮೊಬೈಲ್ ಬಳಕೆಗೆ ಆಕ್ಷೇಪ; ಬಾಲಕ ಸಾವು!!
Tuesday, January 31, 2023
ಮಂಗಳೂರು: ಮನೆಯಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ತಾಯಿ ಆಕ್ಷೇಪಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪದವು ಬಿ ಗ್ರಾಮದ ಕೋಟಿಮುರದ ರೆಡ್ ಬ್ರಿಕ್ಸ್ ಅಪಾರ್ಟ್ಮೆಂಟ್ ನಲ್ಲಿರುವ ಜಗದೀಶ ಎಂಬವರ ಪುತ್ರ ಜ್ನಾನೇಶ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ಜ್ನಾನೇಶ್ ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಜ್ನಾನೇಶ್ ಮನೆಯಲ್ಲಿರುವಾಗ ವಿಪರೀತವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ. ಹಾಗಾಗಿ ತಾಯಿ ಜಾಸ್ತಿ ಮೊಬೈಲ್ ಬಳಕೆ ಮಾಡಬೇಡ ಎಂದು ಗದರಿಸಿದ್ದರು. ಇದರಿಂದ ಬೇಸರಗೊಂಡ ಬಾಲಕ ಸ್ನಾನ ಮಾಡಿ ಬರುತ್ತೇನೆ ಎಂದು ರೂಮಿಗೆ ಹೋದವನು, ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ನಾನ ಮಾಡಿ ಬರುತ್ತೇನೆ ಎಂದವ ಇಷ್ಟು ಸಮಯವಾದ್ರೂ ಯಾಕೇ ಬಾರಲಿಲ್ಲ ಎಂದು ಗಮನಿಸಿದ ತಂದೆ ಜಗದೀಶ್, ಬಾತ್ ರೂಂ ಬಳಿ ಇರುವ ಕಿಟಕಿ ಮೂಲಕ ರೂಂ ನ ಒಳಗಡೆ ನೋಡಿದಾಗ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಅಷ್ಟರ ವೇಳೆಗೆ ಜ್ನಾನೇಶ್ ಸಾವನ್ನಪ್ಪಿದ್ದಾನೆ.
ಇನ್ನು ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
