.jpg)
ಶಾಸಕ ಯುಟಿ ಖಾದರ್ ಅವರನ್ನು NIA ತನಿಖೆಗೆ ಒಳಪಡಿಸಿ: ಬಜರಂಗದಳ ಮುಖಂಡ ಪುನೀತ್ ಅತ್ತಾವರ ಒತ್ತಾಯ
ಸೋಮವಾರ ಸುದ್ದಿಗೋಷ್ಟಿ
ಉದ್ದೇಶಿಸಿ ಮಾತನಾಡಿದ್ದ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯುಟಿ ಖಾದರ್, ಶರಣ್ ಪಂಪ್ವೆಲ್ ಗಡೀಪಾರಿಗೆ
ಆಗ್ರಹಿಸಿದ್ದರು. ಅಲ್ಲದೇ, ಕೊಲೆ ಪಾತಕವನ್ನು ಸಮರ್ಥಿಸುವವರು ದೇಶದ್ರೋಹಿಗಳು. ಇಂತಹವರನ್ನು ಒಪ್ಪಿಕೊಳ್ಳುವುದು
ಸಮಾಜಕ್ಕೆ ಅಪಾಯಕಾರಿ ಎಂದಿದ್ಧಾರೆ. ಜೊತೆಗೆ ಡಿವೈಎಫ್ಐ, ಕಾಂಗ್ರೆಸ್, ಎಸ್ಡಿಪಿಐ, ಜೆಡಿಎಸ್ ಪಕ್ಷಗಳು
ಹಾಗೂ ಮುಸ್ಲಿಂ ಸೆಂಟ್ರಲ್ ಕಮಿಟಿ, ಮುಸ್ಲಿಂ ಸಂಘಟನೆಗಳ ಒಕ್ಕೂಟವು ಶರಣ್ ಬಂಧನಕ್ಕೆ ಒತ್ತಾಯಿಸಿವೆ.
ಹತ್ಯೆಗೀಡಾದ ಫಾಝಿಲ್ ತಂದೆ ಉಮರ್ ಫಾರೂಕ್ ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರನ್ನ ಭೇಟಿಯಾಗಿ ದೂರು
ಸಲ್ಲಿಸಿದ್ದಾರೆ. ಕಾನೂನು ಸಲಹೆ ಪಡೆದು ಕ್ರಮದ ಭರವಸೆಯನ್ನ ಸದ್ಯಕ್ಕೆ ಪೊಲೀಸ್ ಆಯುಕ್ತರು ನೀಡಿದ್ದಾರೆ.
ಖಾದರ್ ವಿರುದ್ಧ
ಮುಗಿಬಿದ್ದ VHP!
ಸುದ್ದಿಗೋಷ್ಟಿ ನಡೆಸಿ ಶರಣ್ ಪಂಪ್ವೆಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಯುಟಿ ಖಾದರ್ ವಿರುದ್ಧ ತಿರುಗಿ ಬಿದ್ದಿರುವ ವಿಶ್ವ ಹಿಂದೂ ಪರಿಷತ್, ಇತ್ತೀಚೆಗೆ NIA ಯಿಂದ ಬಂಧಿಸಲ್ಪಟ್ಟ ಉಡುಪಿಯ ರಿಶಾನ್ ತಾಜುದ್ದೀನ್ ಶೇಖ್ ತಂದೆಯ ಜೊತೆಗೆ ನಿಂತ ಯುಟಿ ಖಾದರ್ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಶಾಸಕ ಯಟಿ ಖಾದರ್ ಅವರನ್ನು NIA ತನಿಖೆ ನಡೆಸಬೇಕು ಎಂದು ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಆಗ್ರಹಿಸಿದ್ದಾರೆ.
‘‘ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧಿಸಿ ಇತ್ತೀಚೆಗೆ NIA ಬಂಧನ ಮಾಡಿದ ಶಂಕಿತ ಭಯೋತ್ಪಾದಕ ರಿಷಾನ್ ತಾಜುದ್ದೀನ್ ಶೇಕ್ ನ ತಂದೆಯ ಜೊತೆ ಖಾದರ್ ಗೆ ನಿಕಟ ಸಂಪರ್ಕವಿತ್ತು. ತಾಜುದ್ದೀನ್ ತಂದೆಯ ಜೊತೆಗಿನ ಖಾದರ್ ಫೋಟೋಗಳು ವೈರಲ್ ಆಗಿದೆ. ಹೀಗಾಗಿ ಭಯೋತ್ಪಾದಕರನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಖಾದರ್ ಬಗ್ಗೆ ಕೂಡ ನಮಗೆ ಸಂಶಯವಿದ್ದು ಕೂಡಲೇ ಉಳ್ಳಾಲದ ಶಾಸಕನ ವಿರುದ್ದ NIA ತನಿಖೆ ನಡೆಸಬೇಕು‘‘ ಎಂದು ಪುನೀತ್ ಅತ್ತಾವರ ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಆಗ್ರಹಿಸಿದ್ದಾರೆ.
ಶಿವಮೊಗ್ಗಟ್ರಾಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಗೆ ಸಂಬಂಧಿಸಿ ಇತ್ತೀಚೆಗೆNIAಬಂಧನಮಾಡಿದಶಂಕಿತ ಭಯೋತ್ಪಾದಕರಿಷಾನ್ ತಾಜುದ್ದೀನ್ ಶೇಕ್ ನ ತಂದೆಯಜೊತೆ ಖಾದರ್ ಗೆನಿಕಟ ಸಂಪರ್ಕವಿತ್ತು. ತಾಜುದ್ದೀನ್ ತಂದೆಯ ಜೊತೆಗಿನಖಾದರ್ ಫೋಟೋಗಳು ವೈರಲ್ ಆಗಿದೆ. ಹೀಗಾಗಿ ಉಳ್ಳಾಲಶಾಸಕನಮೇಲೆಸಂಶಯವ್ಯಕ್ತವಾಗಿದೆ. pic.twitter.com/oFudkW94S5
— puneeth attavara (@PuneethAttavara) January 31, 2023