
BLT: ಚಾಟಿಂಗ್, ವೀಡಿಯೋ ಕಾಲ್, ಸೂಸೈಡ್!?
ಬೆಳ್ತಂಗಡಿ: ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಪರಿಚಿತ ವ್ಯಕ್ತಿಯ ಪರಿಚಯವಾಗಿ ಚಾಟಿಂಗ್, ವೀಡಿಯೋ ಕಾಲ್ ನಲ್ಲಿ ಮಾತನಾಡಿ ಬಳಿಕ ಬ್ಲಾಕ್ ಮೇಲ್ ಗೊಳಗಾದ ಯುವಕನೋರ್ವ ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.
ಬೆಳ್ತಂಗಡಿಯ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದ ಹರ್ಷಿತ್(19) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುಮಾರು 15 ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಅಪರಿಚಿತ ವ್ಯಕ್ತಿಯ ಪರಿಚಯವಾಗಿದೆ. ಆ ನಂಬರ್ ನಲ್ಲಿ ಸಾವಿತ್ರಿ ಎಂಬ ಹೆಸರು ಚಾಲ್ತಿಯಲ್ಲಿತ್ತು. ಬಳಿಕ ಈ ಯುವಕ ಮೆಸೆಜ್, ಕಾಲ್, ವೀಡಿಯೋ ಕಾಲ್ ವರೆಗೂ ಮುಂದುವರಿದಿದ್ದಾನೆ. ಬಳಿಕ ಆ ಸಾವಿತ್ರಿ ಹೆಸರಿನ ನಂಬರ್ ನ ವ್ಯಕ್ತಿ ಹರ್ಷಿತ್ ನಿನ್ನ ಬೆತ್ತಲೆ ವೀಡಿಯೋ ಇದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ವೀಡಿಯೋ ಡಿಲಿಟ್ ಮಾಡಬೇಕಾದರೆ 11 ಸಾವಿರ ಹಣ ನೀಡಬೇಕೆಂದು ಅಪರಿಚಿತ ವ್ಯಕ್ತಿ ಒತ್ತಾಯಿಸಿದ್ದಾನೆ. ಹಣ ಹೊಂದಿಸಲು ಸಾಧ್ಯವಾಗದಿದ್ದಾಗ, ಹೆದರಿ ಮನನೊಂದು ಹರ್ಷಿತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.