UDUPI: ಮಲ್ಪೆ "ಸೀ-ವಾಕ್" ದೀಪವು ಇಲ್ಲ.. ನಿರ್ವಹಣೆಯು ಇಲ್ಲ.. ಕತ್ತಲಿನಲ್ಲಿ ಪ್ರವಾಸಿಗರು...!!
ಮಲ್ಪೆ: ಇದು ರಾಜ್ಯದ ಮೊದಲ ಸಮುದ್ರ ನಡಿಗೆ ಮಾರ್ಗ( ಸೀ ವಾಕ್). ಪ್ರತಿನಿತ್ಯ ಸೀ ವಾಕ್ ನಲ್ಲಿ ನಿಂತು ಸೂರ್ಯಾಸ್ತ ನೋಡಲೆಂದೆ ಸಾವಿರಾರು ಪ್ರವಾಸಿಗರು ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಆದರೆ ಸೀ ವಾಕ್ ನಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಆತಂಕದಲ್ಲಿಯೇ ಪ್ತವಾಸಿಗರು ಸೀ ವಾಕ್ ಗೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. 53.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಈ ಸೀ ವಾಕ್, 2018 ಉದ್ಘಾಟನೆಗೊಂಡು ರಾಜ್ಯದ ಮೊದಲ ಸೀ ವಾಕ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತ್ತು. ಆದ್ರೆ ಇದೀಗ ಆತಂಕದಲ್ಲಿಯೇ ಪ್ತವಾಸಿಗರು ಸೀ ವಾಕ್ ಗೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ.
ನಿರ್ವಹಣೆಯಿಲ್ಲದೆ ಕತ್ತಲಿನಲ್ಲಿ ಪ್ರವಾಸಿಗರು...!! ಹೌದು ಸಂಜೆಯ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಿತ್ಯ ಇಲ್ಲಿಗೆ ಸಾವಿರಾರು ಪ್ರವಾಸಿಗರು ಬರ್ತಾರೆ, ಆದರೆ ಸೀ ವಾಕ್ ನಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಆತಂಕದಲ್ಲಿಯೇ ಪ್ರವಾಸಿಗರು ಇಲ್ಲಿಗೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಂದ ವಾಹನಕ್ಕೆ ಹಣ ಪಡೆದುಕೊಂಡು ಸರಿಯಾದ ನಿರ್ವಾಹಣೆ ಇಲ್ಲದೆ ಇರುವುದಕ್ಕೆ ಪ್ರವಾಸಿಗರು ಅಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.
ಸರಿಯಾದ "ಲೈಟ್" ನ ವ್ಯವಸ್ಥೆಯು ಇಲ್ಲ...!! ಸುಮಾರು 53.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಈ ಸೀ ವಾಕ್ ನಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ದೀಪವು ಸರಿಯಾಗಿ ಉರಿಯುತ್ತಿಲ್ಲ. ಅಲ್ಲಲ್ಲೊಂದು ದೀಪ ಉರಿಯುವುದರಿಂದ ಸಂಜೆ ಆಗುತ್ತಲೆ ಇಲ್ಲಿ ಆತಂಕ ವಾತಾವರಣ ಉಂಟಾಗುತ್ತದೆ. ಸಂಜೆಯ ವೇಳೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರೇ ಇಲ್ಲಿ ತುಂಬಿಹೋಗುವುದರಿಂದ ಸರಿಯಾದ ಲೈಟ್ ವ್ಯವಸ್ಥೆ ಮಾಡಬೇಕೆಂಬುದು ಪ್ರವಾಸಿಗರ ಆಗ್ರಹ.
ಅನಾಹುತ ಸಂಭವಿಸುವುದರ ಮುನ್ನ ಜಿಲ್ಲಾಧಿಕಾರಿಯವರೇ ಎಚ್ಚೆತ್ತುಕೊಳ್ಳಿ: ಇಲ್ಲಿಗೆ ಪ್ರತಿನಿತ್ಯ ಕುಟುಂಬ ಸಮೇತ ಬರುವ ಪ್ರವಾಸಿಗರಗಿಂತ, ಯುವ ಜೋಡಿಗಳೆ ಬರುವುದೇ ಹೆಚ್ಚು.ಇಂತಹ ಸಮಯದಲ್ಲಿ ಈ ಸರಿಯಾದ ನಿರ್ವಾಹಣೆ ಇಲ್ಲದೆ ದೀಪವು ಇಲ್ಲದೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿಯವರು ನಿರ್ವಹಣೆ ಬಗ್ಗೆ ಮನವರಿಕೆ ಮಾಡಬೇಕಾಗಿದೆ.


.jpeg)