
MANGALORE: ಜನಪ್ರಿಯ ಶಾಸಕರಿಂದ ಹೆಲ್ಮೆಟ್ ಇಲ್ಲದ ಪ್ರಯಾಣ!?
ಮಂಗಳೂರು: ಮಂಗಳೂರು ಶಾಸಕ ಯು.ಟಿ.ಖಾದರ್ ಅವ್ರು ಹೊಸ ವಿಚಾರಕ್ಕೊಂದು ಸುದ್ದಿಯಲ್ಲಿದ್ದಾರೆ. ಸದ್ಯ ಅವ್ರು ಪ್ರಚಾರದಲ್ಲಿರೋದು ಹೆಲ್ಮೆಟ್ ಧರಿಸದೆ ಉಳ್ಳಾಲದಲ್ಲಿ ಪ್ರಯಾಣ ಮಾಡಿದ್ದಕ್ಕೆ.
ಹೌದು ಕಾರು ಬಿಟ್ಟು ದ್ವಿಚಕ್ರ ವಾಹನದಲ್ಲಿ ಜನ ಸೇವೆಗೆ ಹೊರಟ ಶಾಸಕ ಯು.ಟಿ.ಖಾದರ್ ಜನರ ಪ್ರಶಂಸೆಗೆ ಕಾರಣರಾಗಿದ್ದಾರೆ. ಆದ್ರೆ ಅವ್ರು ಆಕ್ಟೀವಾದಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದೇ ಪ್ರಯಾಣ ಬೆಳೆಸಿ ಸುದ್ದಿಯಾಗಿದ್ದಾರೆ. ಶಾಸಕರೇ ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡ್ತಾ ಇದ್ದಾರೆ, ಇನ್ನು ಜನ ಸಾಮಾನ್ಯರು ಹೆಲ್ಮೆಟ್ ಧರಿಸ್ತಾರ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.
ಇನ್ನು ಉಳ್ಳಾಲ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಪ್ರಯಾಣಿಸುವುದು ಅಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಶಾಸಕರು ಹೆಲ್ಮೆಟ್ ಧರಿಸದೇ ಸಾಥ್ ಕೊಟ್ಟಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿನಂತಾಗಿದೆ. ಇನ್ನು ಉಳ್ಳಾಲ ಭಾಗದ ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡೋದು ಬೆಳಕಿಗೆ ಬರುತ್ತಿದೆ. ಆದ್ರೆ ಅಲ್ಲಿ ಪೊಲೀಸರೂ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಮನ ಬಂದಂತೆ ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡ್ತಾರೆ. ಇದಕ್ಕೆ ಇದೀಗ ಶಾಸಕ ಯು.ಟಿ.ಖಾದರ್ ಕೂಡ ಸೇರ್ಪಡೆಯಾಗಿದ್ದಾರೆ. ಹೆಲ್ಮೆಟ್ ಧರಿಸೋದ್ರಿಂದ ಆಗೋ ಅಪಾಯವನ್ನ ತಪ್ಪಿಸಬಹುದು. ಆದ್ರೆ ಶಾಸಕರು ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡೋದು ಎಷ್ಟು ಸರಿ. ಸಮಾಜಕ್ಕೆ ನೀಡೋ ಮೆಸೆಜ್ ಆದ್ರೂ ಎಂತಹದ್ದು ಅಂತ ಶಾಸಕರಿಗೆ ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅದೇನೆ ಇರಲಿ ಶಾಸಕರು ಜನ ಸೇವೆಗಾಗಿ ದ್ವಿಚಕ್ರ ವಾಹನದಲ್ಲಿ ಮನೆ ಮನೆಗೆ ಭೇಟಿ ನೀಡಿ ಕಷ್ಟಗಳನ್ನು ಕೇಳೋದು ಒಳ್ಳೆಯ ವಿಚಾರ. ಜನಪ್ರಿಯ ಶಾಸಕ ಯು.ಟಿ. ಖಾದರ್ ಇತರ ಶಾಸಕರಿಗಿಂತ ಭಿನ್ನ, ಅಲ್ದೇ ಇತರ ಶಾಸಕರಿಗೂ ಇವರು ಒಂಥರ ಮಾದರಿ. ಹಾಗಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡ್ಬೇಕಾದ್ರೆ ಹೆಲ್ಮೆಟ್ ಧರಿಸಿದ್ರೆ ಉತ್ತಮ ಅನ್ನೋ ವಿಚಾರ ಶಾಸಕರಿಗೆ ಗೊತ್ತಿರಲಿ.