MANGALORE: ಜಲೀಲ್ ಹತ್ಯೆ ಪ್ರಕರಣ; ನಾಳೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
Monday, December 26, 2022
ಮಂಗಳೂರು: ನಾಳೆ ಮಂಗಳೂರಿನಲ್ಲಿ ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ನೇತೃತ್ವದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ನಡೆಯಲಿದೆ. ನಿರಂತರವಾಗಿ ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ, ದೌರ್ಜನ್ಯಗಳನ್ನ ಮುಂದಿಟ್ಟುಕೊಂಡು, ಹಾಗೆಯೇ ಜಲೀಲ್ ಕೊಲೆ ಪ್ರಕರಣಕ್ಕೆ ನ್ಯಾಯವನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಈ ಸಭೆ ನಡೆಯಲಿದೆ ಎಂದು ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಪದೇ ಪದೇ ಅಶಾಂತಿಯ ವಾತಾವರಣವನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಇದು ಮತ್ತೆ ಮತ್ತೆ ಮರುಕಳಿಸಬಾರದು. ಹಾಗಾಗಿ ಕರಾವಳಿಯಲ್ಲಿ ಶಾಂತಿ ಬಯಸಲು ಇಚ್ಛಿಸುವವರು ಹಾಗೂ ಮಾನವೀಯತೆಯ ಪ್ರೇಮಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ರು. ಇನ್ನು ನಾಳೆ ನಡೆಯಲಿರುವ ಈ ಹಕ್ಕೊತ್ತಾಯ ಸಭೆ ಕೇವಲ ಪ್ರತಿಭಟನೆಯಲ್ಲ. ಇದೊಂದು ಬದುಕಿನ ಹಕ್ಕು ಪಡೆಯಲು ಮಾಡುವ ಬೃಹತ್ ಸಭೆ ಅಂತ ತಿಳಿಸಿದ್ರು.