ಜಲೀಲ್ ಹತ್ಯೆ ಪ್ರಕರಣ: ಹಕ್ಕೊತ್ತಾಯ ಸಭೆಗೆ ಯಾರ ಬೆಂಬಲ ಕೇಳಿಲ್ಲ; ‘ದಿ ನ್ಯೂಸ್ ಅವರ್‘ಗೆ ಝೈನಿ ಕಾಮಿಲ್ ಸ್ಪಷ್ಟನೆ
ಮಂಗಳೂರು:
ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣ ಖಂಡಿಸಿ ಎಸ್.ಎಸ್.ಎಫ್, ಎಸ್.ವೈ.ಎಸ್ ಹಾಗೂ ಕರ್ನಾಟಕ
ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಬೃಹತ್ ಹಕ್ಕೊತ್ತಾಯ
ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಇಂದು (ಮಂಗಳವಾರ)
ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪ್ರತಿಭಟನಾ ಸಭೆಗೆ ಬಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಈ ಪ್ರತಿಭಟನೆಗೆ ಹಲವು ಸುನ್ನೀ ಸಂಘಟನೆಗಳು, ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಾಗೂ ಸೋಶಿಯಲ್ ಡೆಮಾಕ್ರಟಿಕ್
ಪಾರ್ಟಿ ಆಫ್ ಇಂಡಿಯಾ ಬೆಂಬಲಿಸಿವೆ.
ಇದೇ ಬೆನ್ನಿಗೆ
ಇಂದು ನಡೆಯುವ ಕಾರ್ಯಕ್ರಮದ ಬಗ್ಗೆ ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಎಮ್.ಎಸ್.ಎಂ. ಝೈನೀ ಕಾಮಿಲ್ ಜಾಲತಾಣದಲ್ಲಿ
ಪೋಸ್ಟ್ ಹರಿಬಿಟ್ಟಿದ್ದು, ಇವತ್ತಿನ ಸಭೆಯಲ್ಲಿ ಭಾಗವಹಿಸುವವರು ಎಸ್.ಎಸ್.ಎಫ್. ಹಾಗೂ ಎಸ್.ವೈ.ಎಸ್.
ಧ್ವಜಗಳನ್ನು ಹಿಡಿದುಕೊಂಡು ಭಾಗವಹಿಸಬೇಕು. ಯಾವುದೇ ಅನಪೇಕ್ಷಿತ ಘೋಷಣೆ ಕೂಗುವವರ ವೀಡಿಯೋವನ್ನು ಮೊಬೈಲ್
ನಲ್ಲಿ ಸೆರೆ ಹಿಡಿಯುವಂತೆ ಸೂಚಿಸಿದ್ದಾರೆ.
‘‘ ಸುನ್ನೀ
ಸಂಘಟನೆಗಳ ಹೆಸರು ಕೆಡಿಸಲು ಹಿತಶತ್ರುಗಳು ಕಾರ್ಯಕ್ರಮದಲ್ಲಿ ನುಸುಳಿ ಅಹಿತಕರ ಘೋಷಣೆ ಕೂಗುವ, ಗೊಂದಲ
ಸೃಷ್ಟಿಸುವ ಸಾಧ್ಯತೆ ಇದ್ದು ಅಂತದ್ದೇನಾದರೂ ಕಂಡು ಬಂದಲ್ಲಿ ತಕ್ಷಣ ಮೊಬೈಲ್‌ನಲ್ಲಿ ಅವರ ವೀಡಿಯೋ
ಶೂಟಿಂಗ್ ಮಾಡಿ ಸಂಘಟನೆಯ ನಾಯಕರ ಗಮನಕ್ಕೆ ತನ್ನಿರಿ‘‘ ಎಂದು ಸಂದೇಶ ರವಾನಿಸಿದ್ದಾರೆ.
ಈ ಸಂದೇಶ ಕುರಿತು
‘ದಿ ನ್ಯೂಸ್ ಅವರ್‘ ಝೈನೀ ಕಾಮಿಲ್ ಅವರನ್ನು ಸಂಪರ್ಕಿಸಿದಾಗ, ಹೌದು, ನಾವು ಯಾವುದೇ ಸಂಘಟನೆಯ ಬೆಂಬಲವನ್ನು
ಕೇಳಿಲ್ಲ. ಇದು ಶಾಂತಿಯುತವಾಗಿ ನಡೆಯುವ ಪ್ರತಿಭಟನೆ. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ
ನೀಡುವ ಕಾರ್ಯಕ್ರಮವಿದೆ. ಅಲ್ಲದೇ, ಮೊಬೈಲ್ ಚಿತ್ರೀಕರಿಸುವಂತೆ ಸಂದೇಶ ನೀಡಿರುವುದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ.
ಬೃಹತ್ ಹಕ್ಕೊತ್ತಾಯ ಸುನ್ನೀ ಸಂಘಟನೆಗಳಷ್ಟೇ ಬೆಂಬಲಿಸುವ ಸಾಧ್ಯತೆ ಇದ್ದು, ಹಾಗಾಗಿ ಈ ಮೂರು ಸಂಘಟನೆಗಳ ಪ್ರತಿನಿಧಿಗಳಷ್ಟೇ ಅತಿಥಿಗಳಾಗಿ, ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಹಕ್ಕೊತ್ತಾಯ
ಸಭೆಗೆ SDPI ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ
ಎಸ್ಎಸ್ಎಫ್ ಹಾಗೂ ಎಸ್ ವೈಎಸ್ ಸಂಘಟನೆ ವತಿಯಿಂದ ಇಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾಸತ್ತಾತ್ಮಕ ವಾಗಿ ನಡೆಯುವ ಪ್ರತಿಭಟನೆಯಲ್ಲಿ ಜಾತಿ ಭೇದ ಮರೆತು ಎಲ್ಲರೂ ಭಾಗವಹಿಸಿ ಹೋರಾಟವನ್ನು ಯಶಸ್ವಿ ಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ.
ಸುನ್ನೀ ಸಂಘಟನೆಗಳ
ನಡುವೆ ಒಡಕು?
ಎಸ್.ವೈ.ಎಸ್.
ರಾಜ್ಯಾಧ್ಯಕ್ಷರ ಹೇಳಿಕೆ ಸುನ್ನೀ ಸಂಘಟನೆಗಳ ನಡುವಿನ ಒಡಕು ತೋರಿಸುವಂತಿದೆ. ಈಗಾಗಲೇ ಹಲವು ಉಲೆಮಾಗಳು
ಜನ ಬೆಂಬಲ ಕೇಳಿದ್ದಾರೆ. ಸ್ವತಃ ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಈಗಾಗಲೇ ಪ್ರಕಟಣೆ
ನೀಡಿದ್ದು, ಕರಾವಳಿಯ ಶಾಂತಿ ಬಯಸುವವರು ನಮ್ಮೊಂದಿಗೆ ಜೊತೆ ಸೇರಲಿದ್ದಾರೆ ಎಂದಿದ್ದಾರೆ. ಆದರೆ ಕಾಮಿಲ್
ಅವರು ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್. ಧ್ವಜ ಹಿಡಿದು ಬರಬೇಕೆಂದು ಕರೆ ಕೊಟ್ಟಿದ್ದು ಗೊಂದಲಕ್ಕೆ
ಕಾರಣವಾಗಿದೆ.