-->
ಮಂಗಳೂರು: ಕಾಂಗ್ರೆಸ್ ಪ್ರಾಬಲ್ಯ ಕ್ಷೇತ್ರದಲ್ಲಿಯೇ ನೀರಸ; ಮಲ್ಲೂರು ಸಭೆಯ ವೀಡಿಯೋ ವೈರಲ್!

ಮಂಗಳೂರು: ಕಾಂಗ್ರೆಸ್ ಪ್ರಾಬಲ್ಯ ಕ್ಷೇತ್ರದಲ್ಲಿಯೇ ನೀರಸ; ಮಲ್ಲೂರು ಸಭೆಯ ವೀಡಿಯೋ ವೈರಲ್!



ಮಂಗಳೂರು: ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರದಲ್ಲಿಯೇ ಜನ ಒಗ್ಗೂಡಿಸಲು ಕಾಂಗ್ರೆಸ್ ವಿಫಲವಾಗುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರೇ ವೀಡಿಯೋ ವೈರಲ್ ಮಾಡಿದ್ದಾರೆ. ಮಲ್ಲೂರಿನಲ್ಲಿ ನಡೆದ ವಲಯ ಕಾಂಗ್ರೆಸ್ ನೂತನ ಕಾರ್ಯಾಲಯ ಹಾಗೂ ಸೇವಾ ಸಿಂಧು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕುರ್ಚಿಗಳು ಖಾಲಿಯಾಗಿದ್ದು ವೀಡಿಯೋವೊಂದನ್ನ ಕಾರ್ಯಕರ್ತರು ವೈರಲ್ ಮಾಡಿದ್ದು, ಅದರಲ್ಲಿ ಕಾಂಗ್ರೆಸ್ ಸಭೆಗೆ 250ಕ್ಕಿಂತ ಅಧಿಕ ಜನ ಸೇರದಿರುವುದು ಖೇದಕರ ಎಂದು ಬರೆದುಕೊಂಡಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಲ್ಲೂರು ಕಾಂಗ್ರೆಸ್ ಪ್ರಾಬಲ್ಯ ಕ್ಷೇತ್ರ, ಅಲ್ಲಿಯೇ ಜನರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಚರ್ಚೆಗಳಿಗೆ ಆಸ್ಪದವೊದಗಿಸಿದೆ. 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. 

ಮಲ್ಲೂರು ಮೊಯ್ದಿನ್ ಬಾವಾ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಂತಹ ಪ್ರದೇಶವಾಗಿದ್ದು, ಈ ಬಾರಿ ಅಭ್ಯರ್ಥಿ ಬದಲಾವಣೆ ಆಗಲಿದೆ ಅನ್ನೋ ವಿಚಾರವಾಗಿ ಪಕ್ಷದಲ್ಲಿ ಉಂಟಾದ ಗೊಂದಲದಿಂದಾಗಿ ಕಾರ್ಯಕರ್ತರು ದೂರ ಸರಿಯುತ್ತಿದ್ದಾರೆ ಎನ್ನಲಾಗಿದೆ.

ವೈರಲ್ ಆಗಿರುವ ವೀಡಿಯೋ



Ads on article

Advertise in articles 1

advertising articles 2

Advertise under the article