-->
ಮಂಗಳೂರು: ಮಹಿಳೆ ಜೊತೆ ಲಾಡ್ಜ್ ಗೆ ಬಂದಿದ್ದವನ ಡೆಡ್ ಬಾಡಿ ಬೆತ್ತಲೆಯಾಗಿ ಪತ್ತೆ!

ಮಂಗಳೂರು: ಮಹಿಳೆ ಜೊತೆ ಲಾಡ್ಜ್ ಗೆ ಬಂದಿದ್ದವನ ಡೆಡ್ ಬಾಡಿ ಬೆತ್ತಲೆಯಾಗಿ ಪತ್ತೆ!

 


ಮಂಗಳೂರು: ನಗರದ ಪಂಪ್ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ ನಲ್ಲಿ ಕಾಸರಗೋಡು ಮೂಲದ ವ್ಯಕ್ತಿಯೋರ್ವ ಶಂಕಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಲಾಡ್ಜ್ ನಲ್ಲಿ ಸಿಕ್ಕ ವ್ಯಕ್ತಿಯನ್ನು ಅಲ್ಲಿ ಸಿಕ್ಕಿರುವ ಡ್ರೈವಿಂಗ್ ಲೈಸೆನ್ಸ್ ಆಧಾರದಲ್ಲಿ ಕಾಸರಗೋಡಿನ ಪೈವಳಿಕೆ ನಿವಾಸಿ ಅಬ್ದುಲ್ ಕರೀಮ್ (55) ಎಂದು ಗುರುತಿಸಲಾಗಿದೆ.

ವ್ಯಕ್ತಿಯ ಮೃತದೇಹವು ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿದ್ದು, ಸಮೀಪದಲ್ಲೇ ಕೆಲವು ಬಗೆಯ ಮಾತ್ರೆಗಳು ಪತ್ತೆಯಾಗಿವೆ. ಇನ್ನು ಲಾಡ್ಜ್ ನಲ್ಲಿ ಈತನನ್ನು ಭೇಟಿಯಾಗಲು ಮಹಿಳೆಯೊಬ್ಬಳು ಬಂದಿದ್ದಾಗಿ ಲಾಡ್ಜ್ ಸಿಬ್ಬಂದಿಗಳು ಹೇಳಿದ್ದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ.

Ads on article

Advertise in articles 1

advertising articles 2

Advertise under the article