SULYA: ಭೀಕರ ಅಪಘಾತಕ್ಕೆ ತಾಯಿ-ಮಗು ದಾರುಣ ಸಾವು!!
Monday, December 12, 2022
ಸುಳ್ಯ: ಜಾಲ್ಸೂರು–ಕಾಸರಗೋಡು ರಸ್ತೆಯ ಪರಪ್ಪೆ ಬಳಿ ಮದುವೆ ದಿಬ್ಬಣ ಹೋಗುತ್ತಿದ್ದ ಇನೋವಾ ಕಾರೊಂದು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮ ಆ ವಾಹನದಲ್ಲಿದ್ದ ಸುಳ್ಯ ಮೂಲದ ತಾಯಿ ಮತ್ತು ಮಗು ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ಶಾಹಿನಾ(28) ಹಾಗೂ 3 ವರ್ಷದ ಮಗು ಶಜಾ ಮೃತಪಟ್ಟಿದ್ದಾರೆ. ಇನೋವಾ ಕಾರಲ್ಲಿದ್ದ ಇನ್ನು ನಾಲ್ವರು ತೀವ್ರ ಗಾಯಗೊಂಡಿದ್ದು, ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತಪಟ್ಟ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತರಲಾಗಿದೆ.
