Big Boss: ರೂಪೇಶ್ ಶೆಟ್ಟಿಗೆ ಸಾನ್ಯಾ ಬಟ್ಟೆ ಗಿಫ್ಟ್; ರಾಕ್ ಸ್ಟಾರ್ ಮನೆಯವರ ವಿರೋಧ!
ಬೆಂಗಳೂರು:
ಬಿಗ್ ಬಾಸ್ ಒಟಿಟಿ ವಿನ್ನರ್, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ
ಅಯ್ಯರ್ ನಡುವಿನ ಸಂಬಂಧ ಎಂತದ್ದು ಎಂದು ಎಲ್ಲ ಬಿಗ್ ಬಾಸ್ ವೀಕ್ಷಕರಿಗೆ ತಿಳಿದೇ ಇದೆ. ಸಾನ್ಯಾ ಅಯ್ಯರ್
ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದು, ಇದರಿಂದ ಕೆಲವು ದಿನಗಳ ಕಾಲ ರೂಪೇಶ್ ಮಂಕಾಗಿದ್ದು
ಎಲ್ರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ ಬಟ್ಟೆ ನೀಡುವ ವಿಚಾರದಲ್ಲಿ ಸಾನ್ಯಾ ಅಯ್ಯರ್ ಹಾಗೂ ರೂಪೇಶ್
ಕುಟುಂಬಿಕರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಇದೆಲ್ಲದಕ್ಕೂ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್
ಅವರೇ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.
ಬಿಗ್ ಬಾಸ್
ನಿಂದ ಹೊರ ಬಿದ್ದ ಬಳಿಕವೂ ಸಾನ್ಯಾ ಅಯ್ಯರ್ ರೂಪೇಶ್ ಜಪ ಬಿಟ್ಟಿಲ್ಲ. ಪ್ರತಿ ಬಾರಿಯೂ ರೂಪೇಶ್ ಗೆ
ಸಾನ್ಯಾ ಬಟ್ಟೆಗಳನ್ನು ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ. ಆರಂಭದಲ್ಲಿ ಅದನ್ನ ರೂಪೇಶ್ ಗೆ ತಲುಪಿಸುತ್ತಿದ್ದ
ಬಿಗ್ ಬಾಸ್ ಸಿಬ್ಬಂದಿಗಳು ಇತ್ತೀಚೆಗೆ ನೀಡುತ್ತಿಲ್ಲ ಅನ್ನೋದಾಗಿ ಸಾನ್ಯಾ ದೂರಿದ್ದಾರೆ. ಸಾಮಾಜಿಕ
ಜಾಲತಾಣಗಳಲ್ಲೂ ಈ ಕುರಿತು ಮಾತನಾಡಿ, ಬಿಗ್ ಬಾಸ್ ಗಮನವನ್ನು ಸೆಳೆದಿದ್ದಾರೆ.
ಇದನ್ನ ಖುದ್ದು
ಕಿಚ್ಚ ಸುದೀಪ್ ರೂಪೇಶ್ ಮುಂದಿಟ್ಟಿದ್ದು, ‘‘ಸಾನ್ಯಾ ಬಟ್ಟೆ ಕಳುಹಿಸಿ ಕೊಡುವುದಕ್ಕೆ ನಿಮ್ಮ ಮನೆಯವರ
ವಿರೋಧವಿದೆ. ಯಾವ ಬಟ್ಟೆ ನೀವು ಸ್ವೀಕರಿಸುತ್ತೀರಿ‘‘ ಅನ್ನೋದಾಗಿ ಪ್ರಶ್ನಿಸಿದ್ದಾರೆ. ಆಗ ರೂಪೇಶ್,
‘‘ನನಗೆ ಸದ್ಯಕ್ಕೆ ಮನೆಯವರು ಕೊಟ್ಟ ಬಟ್ಟೆಗಳಷ್ಟೇ ಸಾಕು. ನನಗೆ ಸಾನ್ಯಾ ಹಾಗೂ ಮನೆಯವರು ಇಬ್ಬರೂ
ಸಮಾನರು. ಎಲ್ಲವನ್ನೂ ಹೊರಗಡೆ ಬಂದು ಮಾತಾಡ್ತೀನಿ. ಸಾನ್ಯಾ ಅರ್ಥ ಮಾಡಿಕೊಳ್ಳಲಿ‘‘ ಅನ್ನೋ ರೀತಿಲಿ
ಪ್ರತಿಕ್ರಿಯಿಸಿದ್ದಾರೆ.