ಮತ್ತೆ ಅನೈತಿಕ ಪೊಲೀಸ್ ಗಿರಿ; ಸಿನೆಮಾ ನೋಡಲು ಬಂದ ಜೋಡಿಗೆ ಬಜರಂಗದಳ ಅಡ್ಡಿ!
Saturday, December 17, 2022
ಮಂಗಳೂರು: ನಗರದ ಬಿಜೈನಲ್ಲಿರುವ ಭಾರತ್ ಸಿನೆಮಾಸ್ ಗೆ ಸಿನೆಮಾ ವೀಕ್ಷಿಸಲು ಬಂದ ಭಿನ್ನಕೋಮಿನ ಜೋಡಿಗೆ ಹಿಂದೂ ಸಂಘಟನೆ ತಡೆಯೊಡ್ಡಿದ ಘಟನೆ ನಡೆದಿದೆ.
ಸಿನೆಮಾ ವೀಕ್ಷಣೆಗೆಂದು ಆಗಮಿಸಿದ್ದ ಜೋಡಿಯನ್ನು ಫಾಲೋ ಮಾಡಿಕೊಂಡ ಬಂದ ಬಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ಅವರ ಹೆಸರು, ವಿಳಾಸಗಳನ್ನ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಬಂದ ಉರ್ವ ಪೊಲೀಸರು ಜೋಡಿಯನ್ನು ಸಂಘಟನೆ ಕಾರ್ಯಕರ್ತರ ಕೈಯಿಂದ ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಮಂಗಳೂರು ನಗರ ಕೇಂದ್ರೀಕರಿಸಿ ಹಲವು ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದೆ.