ಮಂಗಳೂರು: ಗುಣಮುಖನಾದ ಕುಕ್ಕರ್ ಬಾಂಬರ್ ಶಾರೀಕ್; ಬೆಂಗಳೂರಿಗೆ ಶಿಫ್ಟ್
Saturday, December 17, 2022
ಮಂಗಳೂರು: ಆಟೋ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ಸಂಪೂರ್ಣ ಗುಣಮುಖನಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ.
ಈತನನ್ನು NIA ಅಧಿಕಾರಿಗಳು ಬೆಂಗಳೂರು ಕಚೇರಿಗೆ ಕರೆದೊಯ್ದಿದ್ದು ಅಲ್ಲಿ ವಿಚಾರಣೆ ನಡೆಸಲಿದ್ದಾರೆ.
ನವೆಂಬರ್ 19 ರಂದು ನಗರದ ನಾಗುರಿಯಲ್ಲಿ ಶಂಕಿತ ಉಗ್ರ ಶಾರಿಕ್ ಕುಕ್ಕರ್ ಬಾಂಬ್ ತಂದಿದ್ದು, ಆತ ತನ್ನ ಗುರಿ ತಲುಪುವ ಮುನ್ನವೇ ಆಟೋ ರಿಕ್ಷಾದಲ್ಲಿಯೇ ಸ್ಫೋಟಗೊಂಡಿತ್ತು. ಶಾರಿಕ್ 2020 ರ ಗೋಡೆ ಬರಹದ ಆರೋಪಿಯೂ ಆಗಿದ್ದು, ಉಗ್ರ ಕೃತ್ಯದ ಬಗ್ಗೆ ಒಲವು ಹೊಂದಿದ್ದನೆನ್ನಲಾಗಿದೆ.