-->
ಮಂಗಳೂರು: ನ್ಯೂ ಇಯರ್ ಪಾರ್ಟಿಗೂ ಆತಂಕದ ಕರಿಛಾಯೆ; ಬಜರಂಗದಳದಿಂದ ಪಾರ್ಟಿ ನಡೆಸದಂತೆ ತಾಕೀತು!

ಮಂಗಳೂರು: ನ್ಯೂ ಇಯರ್ ಪಾರ್ಟಿಗೂ ಆತಂಕದ ಕರಿಛಾಯೆ; ಬಜರಂಗದಳದಿಂದ ಪಾರ್ಟಿ ನಡೆಸದಂತೆ ತಾಕೀತು!



ಮಂಗಳೂರು: ನೂತನ 2023 ವರ್ಷಾಚರಣೆ ಹಿನ್ನೆಲೆ ಡಿಸೆಂಬರ್ 31 ರ ರಾತ್ರಿ ಹಲವು ಪಬ್, ಹೊಟೇಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಅಂತಹ ಯಾವುದೇ ಅಶ್ಲೀಲ ಹಾಗೂ ಮಾದಕ ದ್ರವ್ಯ ಸೇವನೆಯ ಪಾರ್ಟಿಗೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು ಪೊಲೀಸ್ ಕಮೀಷನರ್ ಅವರನ್ನು ಒತ್ತಾಯಿಸಿದೆ.

ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಕಾರ್ಯಕ್ರಮಗಳು ಪಾಶ್ಚಾತ್ಯ ಸಂಸ್ಕೃತಿಗೆ ಸೇರಿದ್ದು, ಇದನ್ನು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಲವ್ ಜಿಹಾದ್ ಹೆಸರಿನಲ್ಲಿ ಮುಗ್ಧ ಹೆಣ್ಣುಮಕ್ಕಳ ಮೋಸಗೊಳಿಸಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಚೋದನೆ ನೀಡಲಾಗುತ್ತಿದೆ. ಕೇರಳ, ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಇಂತಹ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು ಡ್ರಗ್ ಹಾಗೂ ಸೆಕ್ಸ್ ಮಾಫಿಯಾ ಜಾಸ್ತಿ ಆಗುವ ಸಾಧ್ಯತೆ ಇದೆ. ಆದ್ದರಿಂದ ಹೊಟೇಲ್, ಪಬ್ ಗಳಲ್ಲಿ ಆಯೋಜಿಸಿರುವ ಯಾವುದೇ ಅಶ್ಲೀಲ ನೃತ್ಯ, ಪಾರ್ಟಿಗಳಿಗೆ ಅನುಮತಿ ನೀಡಬಾರದು. ಮತ್ತು ನಿಗದಿತ ಸಮಯಕ್ಕೆ ಎಲ್ಲ ಬಾರ್, ಪಬ್ ಹಾಗೂ ಹೊಟೇಲ್ ಗಳನ್ನು ಮುಚ್ಚಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ ಮಾಡಿದೆ.


ಇತ್ತೀಚೆಗೆ ಮಂಗಳೂರು ನಗರದಲ್ಲಿ ವ್ಯಾಪಕವಾಗಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಿಗೆ, ಇದೀಗ ಹೊಸ ವರುಷದ ಪಾರ್ಟಿ ಆಯೋಜನೆಗೂ ಆತಂಕದ ವಾತಾವರಣ ನಿರ್ಮಾಣವಾದಂತಿದೆ. ಈಗಾಗಲೇ ಅನುಮತಿ ಪಡೆಯಲಾದ ಹೊಟೇಲ್, ಪಬ್ ಗಳಿಗೆ ಪೊಲೀಸರು ಯಾವ ಮಟ್ಟಿಗೆ ರಕ್ಷಣೆ ಒದಗಿಸುತ್ತಾರೆ ಅನ್ನೋದು ಮುಖ್ಯವಾಗಲಿದೆ.

Ads on article

Advertise in articles 1

advertising articles 2

Advertise under the article