ಸುರತ್ಕಲ್: ವ್ಯಕ್ತಿ ಮೇಲೆ ಚಾಕುವಿನಿಂದ ಇರಿದು ಹತ್ಯೆ; ಮತ್ತೆ ಆತಂಕದ ವಾತಾವರಣ!
ಮಂಗಳೂರು: ನಗರದ ಹೊರವಲಯದ ಸುರತ್ಕಲ್ ನ ಕಾಟಿಪಳ್ಳದ ನಾಲ್ಕನೇ ವಾರ್ಡ್
ನಲ್ಲಿ ವ್ಯಕ್ತಿಯೋರ್ವರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ನೈತಂಗಡಿ ಬಳಿಯ ಲತೀಫಾ ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಜಲೀಲ್
ಎಂಬವರ ಮೇಲೆ ಚೂರಿ ಇರಿತ ನಡೆದಿದ್ದು, ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ
ಫಲಿಸದೇ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಸಾವೀಗೀಡಾಗಿದ್ದಾಗಿ ತಿಳಿದು ಬಂದಿದೆ. ಪೂರ್ವಾದ್ವೇಷದ ಹಿನ್ನೆಲೆ
ಘಟನೆ ನಡೆದಿರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ ಆದರೂ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಸುರತ್ಕಲ್
ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು
ಬಳಿಕ ಪರಾರಿಯಾಗಿದ್ದಾಗಿ ಹೇಳಲಾಗುತ್ತಿದೆ. ಘಟನೆ ಬೆನ್ನಿಗೆ ಸುರತ್ಕಲ್ ಭಾಗದಲ್ಲಿ ಆತಂಕದ ವಾತಾವರಣ
ಮನೆ ಮಾಡಿದೆ.
ಜುಲೈ 28 ರಂದು ಫಾಝಿಲ್ ಹತ್ಯೆ ನಡೆದ ಬಳಿಕ ಸುರತ್ಕಲ್ ವ್ಯಾಪ್ತಿಯಲ್ಲಿ
ಇದುವರೆಗೂ ಆತಂಕ ನೆಲೆ ಮಾಡಿತ್ತು. ಇದೀಗ ಮತ್ತೊಂದು ಕೊಲೆ ನಡೆದ ಬೆನ್ನಿಗೆ ಜನತೆ ಆತಂಕಕ್ಕೀಡಾಗಿದ್ದಾರೆ.