ಮೂಡುಬಿದಿರೆ: ಅಕ್ರಮ ಕಸಾಯಿ ಖಾನೆಗೆ ಹಿಂದೂ ಸಂಘಟನೆ ದಾಳಿ; ಇಬ್ಬರು ಪೊಲೀಸ್ ಬಲೆಗೆ
Saturday, December 24, 2022
ಮಂಗಳೂರು:
ಮೂಡಬಿದ್ರಿಯ ಆಲಂಗಾರಿನ
ಆಶ್ರಯ ಕಾಲನಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಮುಂಜಾನೆ ದಾಳಿ ನಡೆಸಿ ದನದ ಮಾಂಸ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಶ್ರಯ ಕಾಲನಿಯ ಗಿಲ್ಬಟ್೯ ಮತ್ತು ಆಲ್ವಿನ್ ಬಂಧಿತರು. ಗಿಲ್ಬರ್ಟ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದು ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆ ದಾಳಿ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ದನವನ್ನು ವಧಿಸಿ ಮಾಡಲಾದ ಮಾಂಸ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ 4 ದನಗಳನ್ನು ರಕ್ಷಿಸಲಾಗಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.