-->
ಮುಸ್ಲಿಮರಿಗೆ ಪಬ್, ಬಾರ್ ಗಳ ಅಗತ್ಯವೇ ಇಲ್ಲ; ಪುನೀತ್ ಅತ್ತಾವರಗೆ ಎಸ್ಡಿಪಿಐ ಮುಖಂಡನ ತಿರುಗೇಟು

ಮುಸ್ಲಿಮರಿಗೆ ಪಬ್, ಬಾರ್ ಗಳ ಅಗತ್ಯವೇ ಇಲ್ಲ; ಪುನೀತ್ ಅತ್ತಾವರಗೆ ಎಸ್ಡಿಪಿಐ ಮುಖಂಡನ ತಿರುಗೇಟು



ಮಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನಡೆಸಲಾಗುವ ಪಾರ್ಟಿಗಳಿಗೆ ಮುಸ್ಲಿಮ್ ಯುವಕರಿಗೆ ಅವಕಾಶ ನೀಡಬಾರದೆಂದು ಪಬ್, ಹೊಟೇಲ್ ಮಾಲಿಕರಿಗೆ ಬಜರಂಗದಳ ಒತ್ತಾಯಿಸಿದೆ. ಇದೇ ಬೆನ್ನಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ತಿರುಗೇಟು ನೀಡಿದ್ದು, ಮುಸ್ಲಿಮ್ ಯುವಕರಿಗೆ ಪಬ್, ಬಾರ್ ಗಳ ಅಗತ್ಯವೇ ಇಲ್ಲ ಎಂದಿದ್ದಾರೆ.

#SaveMangalorefromRSSgoons ಹ್ಯಾಷ್ ಟ್ಯಾಗ್ ನಡಿ ಟ್ವೀಟ್ ಮಾಡಿರುವ ಅವರು, ಬಜರಂಗಳದ ಮಂಗಳೂರು ಸಂಚಾಲಕ ಪುನೀತ್ ಅತ್ತಾವರ ಅವರ ವೀಡಿಯೋ ಉಲ್ಲೇಖಿಸಿ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

’‘ಮಂಗಳೂರಿನಲ್ಲಿ ಅತೀ ಹೆಚ್ಚು ಪಬ್ ನಡೆಸುವವರು BJP/RSS ನಾಯಕರೇ. ಪಬ್ ಗೆ ಕರ್ಕೊಂಡು ಹೋಗೋರು ಇವರೇ. ಮಸಾಜ್ ಸ್ಪಾ, ವೇಶ್ಯವಾಟಿಕೆ ದಂಧೆಯಲ್ಲಿ ಇರೋರು ಇವರೇ. ಇದೀಗ ನ್ಯೂ ಇಯರ್ ಪಾರ್ಟಿ ಹೆಸರಲ್ಲಿ ಬಂದಿದ್ದಾರೆ. ಮುಸ್ಲಿಮರಿಗೆ ಅಗತ್ಯವೇ ಇಲ್ಲಾ ಪಬ್ ಬಾರ್ ಗಳದ್ದು. ಜಿಲ್ಲಾಡಳಿತ ಎಚ್ಚೆತ್ತರೆ ಶಾಂತಿ ಕಾಪಾಡಬಹುದು‘‘ ಎಂದು ಟ್ವೀಟಿಸಿದ್ದಾರೆ.


ಈಗಾಗಲೇ 2023 ಇಸವಿಯನ್ನು ಸ್ವಾಗತಿಸಲು ಮಂಗಳೂರು ಸಜ್ಜಾಗಿದೆ. ಹೆಚ್ಚಿನ ಹೊಟೇಲ್, ಪಬ್ ಗಳಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಈ ಮಧ್ಯೆ ಬಜರಂಗದಳ ಕ್ಯಾತೆ ತೆಗೆದಿದ್ದು ಪಾರ್ಟಿಗಳಿಗೆ ಅನುಮತಿ ನೀಡದಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.

Ads on article

Advertise in articles 1

advertising articles 2

Advertise under the article